Saturday, June 28, 2025

ಪರ್ತಿಪ್ಪಾಡಿ: ಖುವ್ವತುಲ್ ಇಸ್ಲಾಂ ದಫ್ ಕಮಿಟಿ 45ನೇ ವಾರ್ಷಿಕೋತ್ಸವ

ವಿಟ್ಲ: ಖುವ್ವತುಲ್ ಇಸ್ಲಾಂ ದಫ್ ಕಮೀಟಿ ವಿಟ್ಲ ಪರ್ತಿಪ್ಪಾಡಿ ಇದರ 45 ನೆ ವಾರ್ಷಿಕೋತ್ಸವದ ಅಂಗವಾಗಿ ಧಾರ್‍ಮಿಕ ಕಾರ್‍ಯಕ್ರಮವು ವಿಟ್ಲ ಪರ್ತಿಪ್ಪಾಡಿ ಜುಮಾ ಮಸೀದಿಯ ಜೀಲಾನಿ ವೇದಿಕೆಯಲ್ಲಿ ನಡೆಯಿತು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಖತೀಬರಾದ ಅಬ್ದುಲ್ ರಹಮಾನ್ ಫೈಝಿ ಉಸ್ತಾದರು ವಹಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು ಅಬ್ದುಲ್ ಸಲಾಂ ಲತೀಫ್ ಮತ ಪ್ರಭಾಷಣಗೈದರು. ಕಾರ್‍ಯಕ್ರಮವನ್ನು ಅಬ್ದುಲ್ ಗಫೂರ್ ದಾರಿಮಿ ಮುದರ್ರಿಸ್ ಪೆರುವಾಯಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 50 ವರ್ಷಗಳಿಂದ ಜುಮಾ ಮಹ್ಸರ ಹೇಳಿದ ದಫ್ ಕಮಿಟಿಯ ಏಳಿಗೆಗಾಗಿ ಶ್ರಮಿಸಿದ ಆದಂ ಕುಂಞಿಯವರಿಗೆ ಜಮಾಅತ್ ವತಿಯಿಂದ ಅಧ್ಯಕ್ಷರಾದ ಕೆ. ಪಿ ಇಸ್ಮಾಯಿಲ್, ಇಬ್ರಾಹಿಂ ಹಾಜಿ ಮದಕ ಶಾಲು ಹೊದಿಸಿ ಸನ್ಮಾನಿಸಿದರು. ವೇದಿಕೆಯಲ್ಲಿ ಎ. ಕೆ ಉಸ್ತಾದ್, ಜುಮಾ ಮಸೀದಿ ಕಾರ್‍ಯದರ್ಶಿ ಕೆ. ಎಸ್. ಸುಲೈಮಾನ್, ಜತೆ ಕಾರ್‍ಯದರ್ಶಿ ಸಯ್ಯದ್ ಅಲಿ, ಪಿ. ಎಂ. ಹಕೀಮ್ ಪರ್ತಿಪ್ಪಾಡಿ, ಹಕೀಮ್ ಮುಸ್ಲಿಯಾರ್ ಸದರ್ ಮುಹಲಿಮ್ ಸಿ. ಎಚ್. ಇಬ್ರಾಹಿಂ ಮುಸ್ಲಿಯಾರ್, ರಫೀಕ್ ಪರ್ತಿಪ್ಪಾಡಿ ,ಕಲಂದರ್ ಪರ್ತಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು. ಉಮ್ಮರ್ ದಾರಿಮಿ ಪರ್ತಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.

More from the blog

Pneumonia : ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..

ಬಂಟ್ವಾಳ: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ಬಿಜೆಪಿ ಕಾರ್ಯಕರ್ತನೊರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಕುಕ್ಕಾಜೆ ನಿವಾಸಿ ಬಿಜೆಪಿ ಯುವ ಕಾರ್ಯಕರ್ತ ,ಸಾಮಾಜಿಕ...

ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾನುಪಲ್ಕೆ : ಶಾಲಾ ಮಂತ್ರಿಮಂಡಲ ಪ್ರಮಾಣವಚನ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನ ವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್...

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...