ವಿಟ್ಲ: ಯುವ ಶಕ್ತಿಯ ಕಾರ್‍ಯ ಧರ್ಮ ಸಂರಕ್ಷಣೆಯ ಕಾರ್‍ಯವಾಗಿದೆ. ಧರ್ಮದ ಸಂರಕ್ಷಣೆಗೆ ಪ್ರತಿಯೊಬ್ಬರು ಪಾರ್ಥರಾಗಬೇಕಾಗಿದೆ. ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವದಾಗಿದೆ. ಆಡಳಿತ ಮಾಡುವರಿಗೆ ತಿಳುವಳಿಕೆಯ ಅರಿವು ಇದ್ದಾಗ ಸಮಾಜ ಅಭಿವೃದ್ಧಿ ಕಾರಣವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಜಠಾಧಾರಿ ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್ ದೈವ) ಕಟ್ಟೆಗಳು ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯ ಸಂದರ್ಭ ನಡೆದ ಧಾರ್‍ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಜಾತಿಯ ನಡುವೆ ನೀತಿಯನ್ನು ಕಟ್ಟುವ ಕಾರ್‍ಯವಾಗಬೇಕು. ಅರಸರ ಆದರ್ಶಗಳನ್ನು ಮುಂದಿನ ಜನಾಂಗ ತಿಳಿಸಬೇಕು. ದೈವಾರಾಧನೆಯಿಂದ ಆರಾಧನೆಯಿಂದ ಕೀರ್ತಿ ಗೌರವ ಪ್ರಾಪ್ತಿಯಾಗುತ್ತದೆ ಎಂದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ ಇತಿಹಾಸದಲ್ಲಿ ಕಳೆದು ಹೋದ ಕ್ಷೇತ್ರಗಳು ಮತ್ತೆ ಎದ್ದು ನಿಲ್ಲುತ್ತಿರುವುದು ಉತ್ತಮ ವಿಚಾರ. ವಿಟ್ಲ ಸೀಮೆಯಲ್ಲಿ ಐತಿಹಾಸಿಕವಾಗಿದ್ದ ಸಂಪ್ರದಾಯ, ಶಿಷ್ಟಾಚಾರಗಳು ಇನ್ನೂ ಸಹ ಉಳಿದುಕೊಂಡಿವೆ ಎಂದರು.
ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ದೈವ ಭಯದ ಹಿಂದೆ ತತ್ವ ಪ್ರೇರಣೆಯಿದೆ. ಯಜಮಾನ ಪದ್ಧತಿಯಿಂದ ಧರ್ಮ ಸಂಸ್ಕೃತಿಯ ಜಾಗೃತಿಯಾಗಿದೆ. ಸಂಸ್ಕೃತಿಯ ಪುನರುತ್ಥಾನ ಅ ನಾವರಣವಾಗುತ್ತಿದೆ ಎಂದರು.
ತುಳುನಾಡ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಮಹೇಂದ್ರನಾಥ ಸಾಲೆತ್ತೂರು ಧಾರ್‍ಮಿಕ ಉಪನ್ಯಾಸ ನೀಡಿದರು. ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು.
ರಾಧಾಕೃಷ್ಣ ಡಿ. ಶೆಟ್ಟಿ ಚೆಲ್ಲಡ್ಕ, ಕಂಬಾರು ದುರ್ಗಾಪರಮೇಶ್ವರೀ ದೇವಸ್ಥಾನದ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ, ಜ್ಯೋತಿಷಿ ಕೆ.ಕೇಶವ ಭಟ್, ಜೀರ್ಣೋದ್ಧಾರ ಸಮಿತಿ ಕಾರ್‍ಯಾಧ್ಯಕ್ಷ ಬಾಬು ಕೆ. ವಿ., ಉಪಸ್ಥಿತರಿದ್ದರು.
ಕೃಷ್ಣಯ್ಯ ಕೆ. ವಿಟ್ಲ ಅರಮನೆ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್‍ಯ ನಿರೂಪಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ವಂದಿಸಿದರು.

