Wednesday, February 12, 2025

ಪರಂಗಿಪೇಟೆ ರೈಲ್ವೆ ಲೆವೆಲ್ ಕ್ರಾಸ್ ಬಂದ್ ಗ್ರಾಮಸ್ಥರ ಪ್ರತಿಭಟನೆ

ಬಂಟ್ವಾಳ: ಪರಂಗಿಪೇಟೆ ಕುಂಪಣಮಜಲು ನಿಂದ ಪೊಳಲಿ, ಮೇರೆಮಜಲು, ಬಜಪೆ ಸಂಪರ್ಕ ದ ರೈಲ್ವೆ ಕ್ರಾಸ್ ನ್ನು ರೈಲ್ವೆ ಇಲಾಖೆಯವರು ಕಡಿತಗೊಳಿಸುತ್ತಾರೆ ಎಂಬ ಮಾಹಿತಿ ಬಂದಿದ್ದು , ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪರಂಗಿಪೇಟೆ ಯ ಸಾರ್ವಜನಿಕ ರು
ಪರಂಗಿಪೇಟೆ ಕುಂಪಣಮಜಲು ರೈಲ್ವೆ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿದರು.


ಹಲವಾರು ವರ್ಷಗಳಿಂದ ಈ ಕ್ರಾಸ್ ಮೂಲಕ ವಾಹನ ಹಾಗೂ ಜನರು ನಡೆದು ಕೊಂಡು ಹೋಗುತ್ತಿದ್ದರು.ಅದರೆ ಪ್ರಸ್ತುತ ರೈಲ್ವೆ ಹಳಿಯ ಕಾಮಗಾರಿ ಯ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ರೈಲ್ವೆ ಲೆವೆಲ್ ಕ್ರಾಸ್ ನ್ನು ಬಂದ್ ಮಾಡಲಾಗಿತ್ತು.
ಮೂರು ದಿನಗಳು ಎಂದು ಹೇಳಿದ್ದ ಇಲಾಖೆ ಒಂದು ವಾರ ಕಳೆದರೂ ಕಾಮಗಾರಿ ಮುಗಿಯದೆ ಜನರು ಸಂಚಾರ ಕ್ಕೆ ಅಡೆತಡೆಯಾಗಿದೆ.
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಇನ್ನೂ ಮೂರು ದಿನಗಳ ಕಾಲ ಕಾಮಗಾರಿ ನಡೆಯಲಿದೆ ಎಂದು ಹೇಳಿದ್ದಾರೆ.
ಹಾಗಾಗಿ ಇವರು ಕಾಮಗಾರಿ ಮಾಡುತ್ತಾರೋ ಅಥವಾ ಪರ್ಮನೆಂಟ್ ಲೆವೆಲ್ ಕ್ರಾಸ್ ಬಂದ್ ಮಾಡುತ್ತಾರೋ ಎಂಬ ಸಂಶಯ ಇಲ್ಲಿನ ಜನರಿಗೆ ಕಾಡುತ್ತಿದೆ.

ಆದರೆ ಈ ಕಾಮಗಾರಿಯ ಬಳಿಕವೂ ರೈಲ್ವೆ ಕ್ರಾಸ್ ನ್ನು ಸಂಪೂರ್ಣ ಬಂದ್ ಮಾಡುತ್ತಾರೆ ಎಂದು ಇಲ್ಲಿನ ಸ್ಥಳೀಯ ರ ಹಾಗೂ ಈ ರಸ್ತೆ ಯ ಮೂಲಕ ಹಾದು ಹೋಗುವವರ ಅಳಲು.

ಹಾಗಾಗಿ ಈ ರಸ್ತೆಯ ಕ್ರಾಸ್ ನ್ನು ಬಂದ್ ಮಾಡದಂತೆ ಇವರು ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.
ಈ ಹಳಿಯ ಕಾಮಗಾರಿಯ ಸಂದರ್ಭದಲ್ಲಿ ಅನೇಕ ವರ್ಷ ಗಳ ಹಿಂದೆ ಅವೈಜ್ಞಾನಿಕ ವಾಗಿ ನಿರ್ಮಾಣ ಮಾಡಿದ ಅಂಡರ್ ಗ್ರೌಂಡ್ ರಸ್ತೆಯ ಮೂಲಕ ಸಂಚರಿಸಲು ಅವರು ಸೂಚಿಸಿದ್ದಾರೆ .‌ಆದರೆ ಈ ರಸ್ತೆಯಲ್ಲಿ ಆರು ತಿಂಗಳ ಕಾಲ ಮಳೆ ನೀರು ನಿಲ್ಲುತ್ತದೆ ಹಾಗಾಗಿ ಆರು ತಿಂಗಳ ಕಾಲ ಈ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ. ಜೊತೆಗೆ ಈ ರಸ್ತೆ ತುಂಬಾ ಅಪಾಯಕಾರಿ ಯಾಗಿದ್ದು ಮಹಿಳೆಯರು ಮತ್ತು ಮಕ್ಕಳು ಸಂಚರಿಸಲು , ನಡೆದುಕೊಂಡು ಹೋಗಲು ಸಾಧ್ಯವಿಲ್ಲ ದ ರೀತಿಯಲ್ಲಿ ಇದೆ.
ಜೊತೆಗೆ ಈ ರಸ್ತೆ ಡಾಮರು ಅಥವಾ ಕಾಂಕ್ರೀಟ್ ಹಾಕದ ಮಣ್ಣಿನ ರಸ್ತೆ .

ಹಾಗಾಗಿ ಈ ಸಮಸ್ಯೆ ಯನ್ನು ಅರಿತುಕೊಂಡು ರೈಲ್ವೆ ಮೇಲ್ ಸೇತುವೆ ನಿರ್ಮಾಣ ಮಾಡಿ ಕೊಡಿ ಅಥವಾ ಈಗ ಇರುವ ಕ್ರಾಸ್ ನ್ನು ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಭಿನ್ನವಿಸಿಕೊಂಡಿದ್ದಾರೆ.

ಮಾಜಿ.ತಾ.ಪಂ.ಸದಸ್ಯ ಇಕ್ಬಾಲ್
ಅವರು ಮಾತನಾಡಿ ಸುಮಾರು ಐದು ಸಾವಿರಕ್ಕಿಂತ ಲೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ಜನರಿಗೆ ಸಂಚಾರಕ್ಜೆ ಬಹಳಷ್ಟು ತೊಂದರೆ ಯಾಗುತ್ತಿದ್ದು ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದಾರೆ.

ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್,
ಮಾತನಾಡಿ ಈಗೀರುವ ಬದಲಿ ರಸ್ತೆ ಸಂಪೂರ್ಣ ಅವೈಜ್ಞಾನಿಕ ವಾಗಿದ್ದು , ಈ ರಸ್ತೆ ನಿರ್ಮಾಣ ದ ವೇಳೆ ಸ್ಥಳೀಯ ಗ್ರಾಮ ಪಂಚಾಯತ್ ಜೊತೆ ರಸ್ತೆ ನಿರ್ಮಾಣ ದ ಸ್ಥಳ ದ ಬಗ್ಗೆ ಮಾಹಿತಿ ಕೇಳದೆ ಮಾಡಿದ್ದಾರೆ. ಇಲ್ಲಿ ಮಳೆ ನೀರು ನಿಂತು ಯಾವುದೇ ಉಪಯೋಗಕ್ಕೆ ಬಾರದ ರಸ್ತೆಯಾಗಿದೆ ಎಂದು ಅವರು ಹೇಳಿದರು.
ಹಾಗಾಗಿ ಜನರಿಗೆ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿರುವ ಲೆವೆಲ್ ಕ್ರಾ ಸಿಂಗ್ ನ್ನು ಬಿಟ್ಟು ಕೊಡುವಂತೆ ಹೇಳಿದರು.
ಸಾಮಾಜಿಕ ಕಾರ್ಯಕರ್ತ
ಸುಕೇಶ್ ಶೆಟ್ಟಿ ತೇವು ಮಾತನಾಡಿ ತಾತ್ಕಾಲಿಕ ಕಾಮಗಾರಿಯ ನೆಪದಿಂದ ಈ ಭಾಗದ ಜನರಿಗೆ ತೊಂದರೆ ಯಾಗುತ್ತಿದ್ದು ಶೀಘ್ರವಾಗಿ ಕ್ರಮಕೈಗೊಳ್ಳಬೇಕು, ಪ್ರತಿಭಟನೆ ತೀವ್ರ ಸ್ವರೂಪ ಪಡೆಯದಂತೆ ಇಲಾಖೆ ಎಚ್ಚರವಹಿಸಬೇಕು ಎಂದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ ರೈಲ್ಬೆ ಲೆವೆಲ್ ಕ್ರಾಸ್ ರೋಡ್ ಬಂದ್ ಮಾ

ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ,
ಸದಸ್ಯ ರಾದ ಹಾಶೀರ್ ಪೇರಿಮಾರ್, ಜಹೀರ್ ಅಬ್ಬಾಸ್, ರಿಯಾಜ್ ಕುಂಪಣಮಜಲು, ಇಕ್ಬಾಲ್ ಸುಜೀರ್,
ಮಾಜಿ ಗ್ರಾ.ಪಂ.ಅದ್ಯಕ್ಷ ಪ್ರಕಾಶ್ ಚಂದ್ರ ರೈ,
ಪ್ರಮುಖರಾದ ಅರಫಾ ಜುಮಾ ಮಸೀದಿ ಕುಂಪಣಮಜಲು ಅಧ್ಯಕ್ಷ
ಮಹಮ್ಮದ್ ಬುಖಾರಿ, ಇಬ್ರಾಹಿಂ ಕುಂಪಣಮಜಲು ಸೆಲಿಂ ಕುಂಪಣಮಜಲು , ಹಮೀದ್ ಪರಂಗಿಪೇಟೆ, ಅಬುಬಕ್ಕರ್ ಪರಂಗಿಪೇಟೆ ಮತ್ತಿತರರು ಪ್ರತಿಭಟನೆಯ ಲ್ಲಿ ಪಾಲ್ಗೊಂಡಿದ್ದರು. ‌
ರೈಲ್ವೆ ಇಲಾಖೆಯ ಪೋಲೀಸ್ ಸಿಬ್ಬಂದಿ ಜಯಪ್ಪ , ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಸ್ಥಳದಲ್ಲಿ ಉಪಸ್ಥಿತರಿದ್ದು ಭದ್ರತೆಯನ್ನು ಮಾಡಿದ್ದರು.

More from the blog

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...