Thursday, February 13, 2025

ಫರಂಗಿಪೇಟೆ ಬಳಿ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಮಸೀದಿ ಅವಶೇಷಗಳು ಮತ್ತು ಮನುಷ್ಯನ ‌ಪಳೆಯುಳಿಕೆಗಳು ಪತ್ತೆ

ಬಂಟ್ವಾಳ: ಫರಂಗಿಪೇಟೆ ಸಮೀಪದ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಸುಮಾರು 300 ವರುಷದ ಹಳೆಯ ಎನ್ನಲಾದ ಮಸೀದಿಯ ಅವಶೇಷಗಳು ಹಾಗೂ ಮುಸ್ಲಿಮರು ದಫನ ಮಾಡಿದ ಮನುಷ್ಯನ ಎಲುಬುಗಳು ಮತ್ತು ಗುಹೆಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳ ಹಿಂದೆ ಎರಡು ಪೆರ್ನಾಲ್ ನಮಾಝ್ ಗೆ ಮಾತ್ರ ಅನುಕೂಲವಾಗುವಂತೆ ಆ ಸ್ಥಳದಲ್ಲಿ‌ ಜೆಸಿಬಿ ಮೂಲಕ ಸಮತಟ್ಟು ಮಾಡುವ ಸಂದರ್ಭದಲ್ಲಿ ಜೆಸಿಬಿ ಆಪರೇಟರ್ ನಿಗೆ ಕರ್ಪೂರ ಸುವಾಸನೆಯ ಪರಿಮಳ ಬರಲಾರಂಭಿಸಿದವು, ಗಡಿ ಬಿಡಿಗೊಂಡ ಜೆ.ಸಿ.ಬಿ‌ ಯ ಅಪರೇಟರ್ ಸ್ಥಳೀಯ ಮುಖಂಡರಿಗೆ ಮಾಹಿತಿಯನ್ನು ನೀಡಿದ್ದಾನೆ, ವಿಷಯ ಅರಿತ ಸ್ಥಳೀಯ ಮುಖಂಡರು ಘಟನಾ ಸ್ಥಳದಲ್ಲಿ ಅಚ್ಚರಿಯೊಂದು‌ ಕಾದಿತ್ತು, ಸರಿ ಸುಮಾರು ಮುನ್ನೂರು ವರ್ಷದ ಹಳೆಯದಾದ ಖಬರ್ ಒಂದು ಗೋಚರಗೊಂಡಿತ್ತು, ಖಬರಿನ ಮುಚ್ಚಿದ ಕಲ್ಲುಗೆ ಕಟ್ಟಲಾದ ಅಡ್ಡ ಕಲ್ಲೋಂದು‌‌ ಕಳಚಿ ಬಿದ್ದಿದ್ದರಿಂದ ಖಬರಿನ ಸುತ್ತಲು‌ ಕರ್ಪೂರದ ಸುವಾಸನೆ ಬರಲಾರಂಭಿಸಿತು, ದಫನ್ ಮಾಡಿದ ವ್ಯಕ್ತಿಯ ತಲೆಯ ಭಾಗವೂ ಕಿಬ್ಲಾಕ್ಕ ಮುಖವಾಗಿ ತಿರುಗಿದ್ದನ್ನು ಕಂಡ ಸ್ಥಳೀಯರೇಲ್ಲರೂ ಅಚ್ಚರಿಗೊಂಡರು, ದಪನ್ ಮಾಡಿದ ಜನಾಝದ ಪಳೆಯುಳಿಕೆ ಈಗಲೂ ನಮ್ಮ ಕಣ್ಣ ಮುಂದಿದ್ದು, ಅದಕ್ಕೆ ಮಂಗಳೂರು ‌ಖಾಝಿಯ ಸೂಚನೆಯಂತೆ ಪುನಃ ಕಲ್ಲನ್ನು ಅಡ್ಡಕಟ್ಟಿ ಮುಚ್ಚಿದರು, ಖಬರಿನ ಪಕ್ಕದಲ್ಲಿ ಆಳವಾದ ಗುಹೆಯು ಕೂಡ ಪತ್ತೆಯಾಗಿದೆ. ಸ್ಥಳೀಯ ಮುಸ್ಲಿಮೇತರರನ್ನು ಸಂಪರ್ಕಿಸಿ ವಿಚಾರಿಸಿದಾಗ ಸೂರ್ಯ ಅಸ್ತದ (ಮಗ್ರಿಬ್) ಸಮಯದಲ್ಲಿ ಯಾವಾಲೂ ನಮಗೆ ಸುಗಂಧದ ಸುವಾಸನೆ ಬೀರುತ್ತಿತ್ತು ಎನ್ನುತ್ತಾರೆ,ಇಂದು ಘಟನಾ ಸ್ಥಳಕ್ಕೆ ಖಾಝಿಯವರು ಬೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಯಥಾಸ್ಥಿತಿಯನ್ನು ಕಾಯ್ದಿರಿಸಲು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...