ಬಂಟ್ವಾಳ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಲಕ್ಮೀಪ್ರಸಾದ್, ಎ.ಸಿ.ರವಿ ಚಂದ್ರ ನಾಯಕ್, ಅವರು ಪರಂಗಿಪೇಟೆ ರೈಲ್ವೆ ಲೆವೆಲ್ ಕ್ರಾಸ್ ನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಂಗಿಪೇಟೆ ಕುಂಪಣಮಜಲು ನಿಂದ ಮೇರೆಮಜಲು ಸಂಪರ್ಕ ದ ಪರಂಗಿಪೇಟೆ ಯ ರೈಲ್ವೆ ಲೆವೆಲ್ ಕ್ರಾಸ್ ನ್ನು ಇಲಾಖೆ ಕಾಮಗಾರಿಯ ನೆಪವೊಡ್ಡಿ ಶಾಸ್ವತವಾಗಿ ಸಂಪರ್ಕ ದ ಕೊಂಡಿಯನ್ನು ಕಳಚಿ ಹಾಕಿತ್ತು.
ಇದರಿಂದ ಆಕ್ರೋಶಿತರಾದ ಸ್ಥಳೀಯ ನಿವಾಸಿಗಳು ಎರಡು ಬಾರಿ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರೈಲ್ವೆ ಲೆವೆಲ್ ಕ್ರಾಸ್ ಮಾಡಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ವಿನಂತಿ ಮಾಡಿದ್ದರು.
ಆದರೆ ಇಲಾಖೆಯವರು ಇವರ ಪ್ರತಿಭಟನೆ ಗೆ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಸಚಿವ ಖಾದರ್ ಅವರಿಗೆ ಸ್ಥಳೀಯ ಪ್ರಮುಖರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಹಿತ ಪೋಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತವಾದ ಪರಿಹಾರ ಕ್ರಮಕೈಗೊಳ್ಳವ ಭರವಸೆ ನೀಡಿದರು.
ನಾಳೆ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿ ಶಾಶ್ವತ ವಾದ ಪರಿಹಾರಕ್ಕೆ ಕ್ರಮಕೈಗೊಳ್ಳಲು ವ್ಯವಸ್ಥೆ ಮಾಡುವ ಭರವಸೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ನೀಡಿದರು.
ಈ ಸಂಧರ್ಭದಲ್ಲಿ
ಗ್ರಾಮಾಂತರ ಎಸ್.ಐ.ಪ್ರಸನ್ನ ಪ್ರಮುಖರಾದ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಗ್ರಾ.ಪಂ.ಆದ್ಯಕ್ಷ ರಮ್ಲಾನ್, ತಾ.ಪಂ.ಮಾಜಿ ಸದಸ್ಯ ಆಸೀಪ್ ಇಕ್ಬಾಲ್, ಸುಕೇಶ್ ಶೆಟ್ಟಿ, ಸೆಲಿಂ ಕುಂಪಣಮಜಲು, ಗ್ರಾ.ಪಂ.ಸದಸ್ಯ ರಾದ ರಿಯಾಜ್ ಕುಂಪಣಮಜಲು, ಜಾಹೀರ್ ಕುಂಪಣಮಜಲು ಸ್ಥಳೀಯ ರಾದ ಧನ್ ರಾಜ್ , ಲಕ್ಷಣ್, ಶೇಖರ್ ಕುಂಪಣಮಜಲು, ಅಶೋಕ್ ಶೆಟ್ಟಿ, ವಿಕ್ರಂ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಇಲ್ಲಿನ ಸಮಸ್ಯೆ ಗಳ ಬಗ್ಗೆ ಬಿಡಿಬಿಡಿಯಾಗಿ ಎಲ್ಲವನ್ನು ಸ್ಥಳೀಯ ರು ಅಧಿಕಾರಿ ಗಳಲ್ಲಿ ವಿವರಿಸಿದರು