ಬಂಟ್ವಾಳ: ಲಾಕ್ ಡೌನ್ ಹಿನ್ನೆಲೆ ರದ್ದುಗೊಳಿಸಲಾಗಿದ್ದ ತಾಲೂಕಿನ ಪ್ರಸಿದ್ದ ಕಾರಣೀಕ ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಸೆ.4 ರಿಂದ ಕೋಲ ಸೇವೆ ಆರಂಭವಾಗಲಿದೆ. ಕೊರೊನಾ ಮಹಾಮಾರಿಯಿಂದ ಜನಸೇರಲು ಅವಕಾಶ ಇರದ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಯಾವುದೇ ಸೇವೆಗಳಿಗೆ ಅವಕಾಶವಿರಲಿಲ್ಲ.
ಶ್ರೀ ಕ್ಷೇತ್ರ ಪಣೋಲಿಬೈಲುನಲ್ಲಿಯೂ ವಾರದಲ್ಲಿ ಮೂರು ದಿನ ನಡೆಯುತ್ತಿದ್ದ ಅಗೇಲು ಸೇವೆ ಹಾಗೂ ಕೋಲ ಸೇವೆಯೂ ಸರಕಾರದ ನಿಯಮದಂತೆ ರದ್ದುಗೊಳಿಸಲಾಗಿತ್ತು. ಇದೀಗ ಸರಕಾರದ ಆದೇಶದಂತೆ (ಸೆ.)4 ನಾಳೆಯಿಂದ ಕೇವಲ ಕೋಲ ಸೇವೆ ಮಾತ್ರ ಆರಂಭವಾಗಲಿದ್ದು ಅಗೇಲು ಸೇವೆಗೆ ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.














