ಬಂಟ್ವಾಳ: ಇತಿಹಾಸ ಪ್ರಸಿದ್ದ ಕಾರಣೀಕ ದೈವಸ್ಥಾನವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ವರ್ಷಾವಧಿ ನ.25ರಂದು ರಾತ್ರಿ ನಡೆಯಿತು.
ನ.24 ರಂದು ಸಂಜೆ ಕೊಪ್ಪರಿಗೆ ಮುಹೂರ್ತ ನಡೆದು ಬಳಿಕ ಶ್ರೀ ಕೃಷ್ಣ ಭಜನಾ ಮಂದಿರ ಪಣೋಲಿಬೈಲು ಇವರಿಂದ ಕುಣಿತ ಭಜನೆ, ನ.25 ರಂದು ಗುರುವಾರ ಕಳಸ ಸುದ್ದಿ, ಗಣಹೋಮ ,ನಾಗತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ವೇಳೆ ಭಜನಾ ಕಾರ್ಯಕ್ರಮ ನಡೆಯಿತು.
ರಾತ್ರಿ ದೈವಗಳಿಗೆ ವರ್ಷಾವಧಿ ಕೋಲ ನಡೆಯಿತು.


ಜನಸಾಗರ:
ಅನೇಕ ವರ್ಷಗಳ ಬಳಿಕ ಪಣೋಲಿಬೈಲು ವರ್ಷಾವಧಿ ಕೋಲಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಳೆದ ಕೆಲ ದಿನಗಳಿಂದ ಸುರಿಯುವ ಮಳೆ ನಿನ್ನೆ ಬರದ ಇದ್ದ ಪರಿಣಾಮ ಭಕ್ತರಿಗೆ ವರ್ಷಾವಧಿ ಕೋಲದಲ್ಲಿ ಭಾಗಿಯಾಗಲು ಇನ್ನಷ್ಟು ಹುರುಪು ನೀಡಿತು.

