ಬಂಟ್ವಾಳ: ಕಾರಣೀಕ ಕ್ಷೇತ್ರವಾದ ಪಣೋಲಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಇಂದು ಹೊಸ ಅಕ್ಕಿ ಅಗೇಲು ಸೇವೆ ನಡೆಯಿತು.




ಅನಾದಿಕಾಲದಿಂದಲೂ ಅಚರಿಸಿಕೊಂಡು ಬಂದಂತೆ ಕಾವೇರಿ ಸಂಕ್ರಮಣದ ದಿನದಂದು ಪಣೋಲಿಬೈಲು ಕಲ್ಲುರ್ಟಿ ದೈವಕ್ಕೆ ಪುದ್ದರ್ ಅಗೇಲು ನಡೆಯುತ್ತಿತ್ತು.
ಕಾವೇರಿ ಸಂಕ್ರಮಣದಂದು ದೈವಕ್ಕೆ ಹೊಸ ಅಕ್ಕಿಯಲ್ಲಿ ಅಗೇಲು ಸೇವೆಗಾಗಿ ಊರಿನ ಎಲ್ಲರೂ ಅಗೇಲು ನೀಡುವುದು ವಾಡಿಕೆ ಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಊರಪರ ಊರ ಭಕ್ತರ ಪುದ್ದರ್ ಅಗೇಲು ನೀಡಲಾಗುತ್ತಿದ್ದು, ಇಂದು ಸುಮಾರು 1300 ಅಗೇಲು ನಡೆದಿದೆ ಎಂದು ಇಲ್ಲಿನ ದೈವದ ಅರ್ಚಕ ರಾದ ವಾಸು ಮೂಲ್ಯ ಮತ್ತು ರಮೇಶ್ ಮೂಲ್ಯ ಮತ್ತು ಮೋನಪ್ಪ ಮೂಲ್ಯ ತಿಳಿಸಿದ್ದಾರೆ.
ಊರಿನವರು ತರಕಾರಿಗಳನ್ನು ಅಗೇಲು ರೂಪದಲ್ಲಿ ನೀಡುತ್ತಾರೆ. ವಿಶೇಷ ವೆಂದರೆ ಕಲ್ಲುರ್ಟಿ ದೈವಕ್ಕೆ ಕೋಳಿ ಪದಾರ್ಥದಲ್ಲಿ ಅಗೇಲು ಸೇವೆ ನೀಡಿದರೆ , ಹೊಸ ಅಕ್ಕಿ ಅಗೇಲು ಸಂದರ್ಭದಲ್ಲಿ ಕೋಳಿ ಪದಾರ್ಥದ ಜೊತೆಯಲ್ಲಿ ವಿವಿಧ ಬಗೆಯ ತರಕಾರಿ ಪದಾರ್ಥಗಳನ್ನು ಮಾಡಿ ಬಡಿಸಲಾಗುತ್ತದೆ.

