ಬಂಟ್ವಾಳ: ಐತಿಹಾಸಿಕ ಹಿನ್ನೆಲೆಯುಳ್ಳ, ಕಾರಣೀಕ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಆಡಳಿತ ಅಧಿಕಾರಿಯಾಗಿ ದಕ್ಷ , ಪ್ರಮಾಣಿಕ ಅಧಿಕಾರಿ ಬಂಟ್ವಾಳ ತಹಶಿಲ್ದಾರ್ ದ.ಕ. ಮೂಲದ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿದೆ.
ಕಳೆದ ಒಂದುವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಆಗಿದ್ದು ಕೊಂಡು ಉತ್ತಮ ಅಧಿಕಾರಿ ಆಗಿರುವ ಇವರು ಪನೋಲಿಬೈಲು ಕ್ಷೇತ್ರದ ಅನನ್ಯ ಭಕ್ತೆ ಕೂಡ ಹೌದು .
ಪುರಸಭಾ ವ್ಯಾಪ್ತಿಯ ಗೂಡಿನಬಳಿಯಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಅಡ್ಡೆಯಾಗಿದ್ದಕೊಂಡು ಸಾರ್ವಜನಿಕ ವಾಗಿ ತೊಂದರೆಯಾಗುತ್ತಿದ್ದ ಸುಣ್ಣದ ಗೂಡು ತೆರವುಮಾಡಿದ ಓರ್ವ ದಕ್ಷ ಅಧಿಕಾರಿಯಾಗಿದ್ದು , ಸರಕಾರದ ಅದೇಶದಂತೆ ಕೋವಿಡ್ ನಿಯಂತ್ರಣದ ವ್ಯವಸ್ಥೆಗಳ ಸಂದರ್ಭದಲ್ಲಿ ಯೂ ಇವರ ಪಾತ್ರ ಹಿರಿದಾಗಿತ್ತು.


ಪ್ರಸ್ತುತ ಇವರು ಪನೋಲಿಬೈಲು ಕಲ್ಲುರ್ಟಿ ದೇವಸ್ಥಾನ ದ ಆಡಳಿತ ಅಧಿಕಾರಿಯಾಗಿ ನೇಮಕವಾಗಿದ್ದಾರೆ, ಇವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಹಾಗೂ ಭಕ್ತರ ಕೆಲವೊಂದು ಬೇಡಿಕೆಗಳು ಈಡೇರಿಕೆಯಾಗಲಿ , ಸಾವಿರಾರು ಭಕ್ತರು ಕ್ಷೇತ್ರ ಕ್ಕೆ ಬೇಟಿ ನೀಡುತ್ತಿದ್ದು ಆಡಳಿತ ಅಧಿಕಾರಿಯವರ ಆಡಳಿತದ ಅವಧಿಯಲ್ಲಿ ಭಕ್ತರ ಅನುಕೂಲ ವಾಗುವಂತಹ ಕಾರ್ಯಗಳು ನೆರವೇರಲಿ ಎಂಬುದು ಭಕ್ತರ ಆಶಯ.












