ತುಳುನಾಡಿನ ಕಾರಣಿಕ ಕ್ಷೇತ್ರ, ಐತಿಹಾಸಿಕ ಸನ್ನಿಧಿಯಾದ ಶ್ರೀ ಕಲ್ಲುರ್ಟಿ ದೈವಸ್ಥಾನ ಪಣೋಲಿಬೈಲು ಕ್ಷೇತ್ರಕ್ಕೆ ಮಂಗಳೂರು ಸಹಾಯಕ ಕಮಿಷನರ್, ಕ್ಷೇತ್ರದ ಆಡಳಿತಾಧಿಕಾರಿ ಮದನ್ ಮೋಹನ್ ಸಿ ಅವರು ಭೇಟಿ ನೀಡಿ, ಶ್ರೀ ಕಲ್ಲುರ್ಟಿ
ದೈವ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಸ್ಥಳಿಯ ಸಜೀಪ ಮೂಡ ಗ್ರಾಮ ಪಂಚಾಯತಿ ಸದಸ್ಯ .
ರಮೇಶ್ ಎಂ. ಭಂಡಾರದ ಮನೆ ಪಣೋಲಿಬೈಲ್ ಅವರು ಸಹಾಯಕ ಕಮಿಷನರ್ ಮದನ್ ಮೋಹನ್ ಸಿ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಶ್ರೀ ಕ್ಷೇತ್ರದ ಪರವಾಗಿ ಗೌರವಿಸಿದರು.
ಕಲ್ಲುರ್ಟಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಹಾಯಕ ಕಮಿಷನರ್ ಅವರಿಗೆ
ಪ್ರಧಾನ ಅರ್ಚಕರಾದ ವಾಸುದೇವ ಮೂಲ್ಯ, ಅರ್ಚಕರಾದ ರಮೇಶ್ ಮೂಲ್ಯ.
ಮೋನಪ್ಪ ಮೂಲ್ಯ ಈ ಸಂದರ್ಭದಲ್ಲಿ ಪ್ರಸಾದ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ದೈವಸ್ಥಾನದ ಸಿಬ್ಬಂದಿ ವರ್ಗ ಹಾಜರಿದ್ದರು.
