ಬಂಟ್ವಾಳ: ನೂತನವಾಗಿ ಅಸ್ತಿತ್ವಕ್ಕೆ ಬಂದ ಪಂಜಿಕಲ್ಲು ಡಾ. ಬಿ .ಆರ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಪಿ.ವಿ. ಆಯ್ಕೆಯಾಗಿದ್ದಾರೆ.
ಪಂಜಿಕಲ್ಲು ಪುಂಚೋಡಿಯ ಸ.ಕಿ.ಪ್ರಾ. ಶಾಲೆ ಬುಡೋಳಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದ್ದು, ಗೌರವಾಧ್ಯಕ್ಷರಾಗಿ ಜಯ ಬುಡೋಳಿ, ಉಪಾಧ್ಯಕ್ಷರಾಗಿ ಸುಂದರ, ಕಾರ್ಯದರ್ಶಿಯಾಗಿ ಕು.ಸೌಮ್ಯ ಆಯ್ಕೆಯಾದರು. ಉಪಕಾರ್ಯದರ್ಶಿಯಾಗಿ ಸಂಧ್ಯಾ, ಕೋಶಾಧಿಕಾರಿಯಾಗಿ ಭಾಸ್ಕರ್ ಅಮ್ಯಾಲ್, ಉಪಕೋಶಾಧಿಕಾರಿಯಾಗಿ ರಮೇಶ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯನ್ನು ಇದೇ ಸಂದರ್ಭ ರಚಿಸಲಾಯಿತು. ಊರ ಹಿರಿಯರಾದ ಗಂಗಾಧರ್ ಕೋಟ್ಯಾನ್ ಪರಾರಿ, ಸುಭಾಷ್ ಪೀರ್ದೊಟ್ಟು ಅಣ್ಣಿ ಉಪಸ್ಥಿತರಿದ್ದರು.


