Tuesday, February 3, 2026

ಪಂಜಿಕಲ್ಲು ಗ್ರಾಮದ ಮತದಾರರ ಮನೆಬಾಗಿಲಿಗೆ ತೆರಳಿ ಮತಯಾಚನೆ ನಡೆಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

ವೈಯಕ್ತಿಕ ವಿಚಾರಗಳು ಏನಿದ್ದರೂ ಎಲ್ಲವನ್ನು ಬದಿಗಿಟ್ಟು, ಕಾರ್ಯಕರ್ತರು ಚುನಾವಣಾ ದಿನದವರೆಗೆ ನಿದ್ರಿಸದೆ ಕಾಲಿಗೆ ಚಕ್ರಕಟ್ಟಿ ನಿರಂತರವಾಗಿ ಮತದಾರರ ಬಳಿಗೆ ತೆರಳಿ ಪ್ರತಿ ಮನೆಯನ್ನು ಸಂಪರ್ಕ ಮಾಡಿ, ಮತದಾರರ ಪಟ್ಟಿ ಒಲೈಕೆ ಮಾಡಿ ಬಂಟ್ವಾಳದಲ್ಲಿ ವಿಜಯದ ಪತಾಕೆ ಹಾರಿಸಿ ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ತಿಳಿಸಿದರು.

ಅವರು ಪಂಜಿಕಲ್ಲು ಗ್ರಾಮದಲ್ಲಿ ಮತದಾರರ ಮನೆಬಾಗಿಲಿಗೆ ತೆರಳಿ ಮತಯಾಚನೆ ನಡೆಸಿ ಮಾತನಾಡಿದರು. ಕಾರ್ಯಕರ್ತರು ನಮ್ಮ ನಮ್ಮ ಬೂತ್ ನ್ನು ಗೆಲ್ಲಲು ಪ್ರಯತ್ನ ಮಾಡಿದಾಗ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಗೆದ್ದರೆ ಸಾಮಾನ್ಯ ಕಾರ್ಯಕರ್ತ ಗೆದ್ದಂತೆ, ಕಾರ್ಯಕರ್ತನ ಗೆಲುವಿಗಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಡಬ್ಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ 2ಸಾವಿರಕ್ಕಿಂತಲೂ ಅಧಿಕ ಅನುದಾನಗಳ ಮೂಲಕ ಸರ್ವವ್ಯಾಪಿ ಸರ್ವಸ್ಪರ್ಷಿಯಾದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಸಿಕ್ಕಿತು. ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಸತಕಾರದ ಜನಪರವಾದ ನೂರಾರು ಯೋಜನೆಗಳ ಬಗ್ಗೆ ಪ್ರತಿಮನೆಮನೆಗೆ ತೆರಳಿ ನೆನಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಕಾರ್ಯಕರ್ತರು ಗೌರವದಿಂದ ಎದೆತಟ್ಟಿ ಹೇಳಬಹುದು,ಆದರೆ ಬಿಜೆಪಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾರದೆ, ಸುಳ್ಳು ಆರೋಪದಲ್ಲಿ ತೊಡಗಿದೆ ಎಂದು ಆರೋಪ ಮಾಡಿದರು.

ದೇಶದಲ್ಲಿ ಜನರನ್ನು ವಿಭಜನೆ ಮಾಡಿ ದ್ವೇಷದ ವಾತಾವರಣ ನಿರ್ಮಾಣ ಮಾಡಿದರು. ಅಧಿಕಾರ ಇಲ್ಲದೆ ನೀರಿನಿಂದ ಮೇಲಕ್ಕೆ ತೆಗೆದ ಮೀನಿನಂತೆ ಒದ್ದಾಡುತ್ತಿದ್ದು, ಇಲ್ಲದ ಗ್ಯಾರಂಟಿಗಳನ್ನು ನೀಡಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಇವರ ಸುಳ್ಳಿನ ಕಂತೆಗಳಿಗೆ ಕ್ಷೇತ್ರದ ಪ್ರಬುದ್ಧ ಜನ ಮೋಸಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಕಾರ್ಯದರ್ಶಿ ರಮನಾಥ ರಾಯಿ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ದಬ್ಬಾಳಿಕೆಗೆ ಒಳಗಾದ ಗ್ರಾಮಪಂಚಾಯತ್ ಇದ್ದರೆ ಅದು ಪಂಜಿಕಲ್ಲು ಗ್ರಾ.ಪಂ. ಎಂಬುದು ಮತದಾರರಿಗೆ ಮರೆತಿಲ್ಲ ಎಂದು ನೆನಪಿಸಿದರು. ಹಾಗಾಗಿ ಹಳೆಯ ಘಟನೆಗಳನ್ನು ಮತ್ತೆ ನೆನಪಿಸುವ ಮೂಲಕ ಕಾಂಗ್ರೆಸ್ ನ್ನು ತೊಲಗಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಗ್ರಾಮಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಪಂಜಿಕಲ್ಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಧಿಕ ಮತಗಳನ್ನು ಯಾವ ರೀತಿಯಲ್ಲಿ ಪಡೆಯಲು ಸಾಧ್ಯ ಎಂಬುದನ್ನು ಕಾರ್ಯಕರ್ತರು ತಂತ್ರಗಾರಿಕೆ ರೂಪಿಸಬೇಕಾಗಿದೆ ಎಂದು ತಿಳಿಸಿದ ಅವರು,ಹಿಂದುತ್ವದ ಉಳಿವಿಗಾಗಿ ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಶಾಸಕರಾಗಬೇಕು ಎಂದು ಅವರು ಮನವಿ ಮಾಡಿದರು.

ಪ್ರಕಾಶ್ ಅಂಚನ್ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ರಾಜೇಶ್ ನಾಯ್ಕ್ ಅವರ ಶ್ರಮದ ಫಲವಾಗಿ ಕೋಮುಗಲಭೆಯಿಲ್ಲದ ಶಾಂತಿಯ ನವಬಂಟ್ವಾಳವಾಗಿ ಮಾರ್ಪಾಡು ಆಗಿದೆ, ಮುಂದಿನ ದಿನಗಳಲ್ಲಿ ಇದೇ ಶಾಂತಿಯ ಬಂಟ್ವಾಳವನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎಂದು ಬಿಜೆಪಿ ಗ್ಯಾರಂಟಿ ನೀಡುತ್ತದೆ ಎಂದು ಅವರು ತಿಳಿಸಿದರು.

ಕಳೆದ 30 ವರ್ಷಗಳಲ್ಲಿ ದ್ವೇಷದ ರಾಜಕೀಯ ಮಾಡಿದ ಪಂಜಿಕಲ್ಲು ಸರಕಾರಿ ಶಾಲೆಗೆ ಅನ್ಯಾಯ ಮಾಡಿದ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ಮಕ್ಕಳ ಅನ್ನಕಸಿದ ಕಾಂಗ್ರೆಸ್ ಬಂಟ್ವಾಳದಿಂದ ದೂರವಾಗಬೇಕು ಎಂದು ಮನವಿ ಮಾಡಿದರು‌.

ಉಪಾಧ್ಯಕ್ಷೆ ಜಯಶ್ರೀ ಪಟ್ರಾಡಿ, ಸದಸ್ಯರಾದ ವಿಕೇಶ್,ಮೋಹನ್ ದಾಸ್, ಬಾಲಕೃಷ್ಣ, ಹರೀಶ್, ಪೂವಪ್ಪ ಮೆಂಡನ್, ಚಂದ್ರಾವತಿ, ಶೋಭಾ, ಲಕ್ಮೀನಾರಾಯಣ, ಪ್ರಮುಖರಾದ ನಾರಾಯಣ ಭಂಡಾರಿ, ಪ್ರವೀಣ್ ಪೂಜಾರಿ, ಆನಂದ ಕೋಟ್ಯಾನ್, ಗೋಪಾಲ ಪೂಜಾರಿ, ಹರಿಣಾಕ್ಷಿ, ಮಾದವ ಕರ್ಬೆಟ್ಟು, ಶಿವರಾಮ, ಅಶೋಕ್, ಮೋನಪ್ಪ ಪೂಜಾರಿ ಕರ್ತಾಜೆ, ಜಗದೀಶ್ ಬಾಕಿಮಾರ್, ಹರೀಶ್ ಕುಲಾಲ್, ಆಶ್ಬಿನ್ ಕುಲಾಲ್ ,ಜೋಕಿಂ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

More from the blog

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...

ಮತ್ತೆ ಚಿನ್ನದ ಬೆಲೆ ಕುಸಿತ ! ಇಂದಿನ ದರ ಎಷ್ಟಿದೆ ಗೊತ್ತಾ?

ಮಂಗಳೂರು: ಕಳೆದ ಕೆಲವು ದಿನಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈಗ ಸತತವಾಗಿ ಇಳಿಕೆ ಕಾಣುತ್ತಿವೆ. ಫೆಬ್ರವರಿ 3 2026, ಮಂಗಳವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್‌ನ ಚಿನ್ನದ ಬೆಲೆಯು...

ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ರೂ. ಅನುದಾನ : ಸಚಿವ ವಿ.ಸೋಮಣ್ಣ

ಬೆಂಗಳೂರು : ರಾಜ್ಯದ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ 7748 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಈ ವಿಚಾರವಾಗಿ ಮಾಹಿತಿ ನೀಡಿದ ಅವರು, 2009ರಿಂದ...

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...