ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಸಿಡಿಲು ಬಡಿದು ಪಂಪು ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ರಾತ್ರಿ ನಡೆಸಿದೆ.


ಗ್ರಾಮದ ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ಅವರ ತೋಟದ ಶೆಡ್ಡಿಗೆ ರಾತ್ರಿ ವೇಳೆ ಸಿಡಿಲು ಬಡಿದಿದ್ದು, ಶೆಡ್ ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಶೆಡ್ ನಲ್ಲಿದ್ದ ಅಡಿಕೆ, ತೆಂಗಿನಕಾಯಿ ಸುಟ್ಟು ಭಸ್ಮವಾಗಿದೆ.

