Saturday, July 5, 2025

Netravathi Bridge: ಪಾಣೆಮಂಗಳೂರು ಸೇತುವೆಯಲ್ಲಿ ಸಂಚಾರಕ್ಕೆ ಬಿಗ್ ರಿಲೀಫ್ ..

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಸಾಮರ್ಥ್ಯ ಪರೀಕ್ಷೆಯನ್ನು ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯ ಅಧಿಕಾರಿಗಳು ಮಾಡಿದ್ದು, ಇದೀಗ ವರದಿಯನ್ನು ಬಂಟ್ವಾಳ ಪುರಸಭಾ ಇಲಾಖೆಗೆ ನೀಡಿದ್ದಾರೆ.

ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್ ಐ ಟಿ ಕೆ ಸಂಸ್ಥೆಯಿಂದ ಪ್ರೊಫೆಸರ್ ಡಾಕ್ಟರ್ ಪಲಿನಿ ಸ್ವಾಮಿ, ವಿಜಯನ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದು, ಇದೀಗ ವರದಿ ನೀಡಿದ್ದಾರೆ.

ವರದಿಯಲ್ಲಿ ಏನಿದೆ?

ಪಾಣೆಮಂಗಳೂರು ಹಳೆಯ ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಹಂತದಲ್ಲಿ, ಸೇತುವೆಯ ಒಟ್ಟಾರೆ ಆರೋಗ್ಯವನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಸಾಧ್ಯವಿಲ್ಲ.

ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ, ತಾತ್ಕಾಲಿಕವಾಗಿ ಲಘು ವಾಹನಗಳ ಸಂಚಾರವನ್ನು ಮಾತ್ರ ಅನುಮತಿಸಲು ಶಿಫಾರಸು ಮಾಡಲಾಗಿದೆ.

ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ದುರಸ್ತಿ, ಬಲಪಡಿಸುವಿಕೆ ಅಥವಾ ಬದಲಿ ಕ್ರಮಗಳನ್ನು ನಿರ್ಧರಿಸಲು ಸಮಗ್ರ ತಾಂತ್ರಿಕ ಅಧ್ಯಯನವನ್ನು ಆದಷ್ಟು ಬೇಗ ಕೈಗೊಳ್ಳಬೇಕು. ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮಳೆಗಾಲವಾಗಿದ್ದರಿಂದ ಸೇತುವೆಯ ಫಿಲ್ಲರ್ ಹಾಗೂ ಹೆಚ್ಚಿನ ಪರಿಶೀಲನೆ ಅಸಾಧ್ಯ ಎಂದು ಅ ಸಂದರ್ಭದಲ್ಲಿ ತಿಳಿಸಿದ್ದರು.

ಸೇತುವೆ ಪ್ರವೇಶದ ಆರಂಭಿಕ ಜಾಗದಲ್ಲಿ ಅಗತ್ಯವಿರುವ ಹಿನ್ನಲೆಯಲ್ಲಿ ಇಲಾಖೆಯ ವತಿಯಿಂದ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮಾಹಿತಿಯನ್ನು ಸ್ಥಳದಲ್ಲಿಯೇ ತಿಳಿಸಿದ್ದರು,ಇದೀಗ ವರದಿಯಲ್ಲಿ ಕೂಡ ತಿಳಿಸಲಾಗಿದ್ದು, ಇನ್ನೂ ‌ಕೆಲವು ಸಣ್ಣ ಪುಟ್ಟ ಕಾಮಗಾರಿಗಳನ್ನು ನಡೆಸಲು ವರದಿಯಲ್ಲಿ ಸೂಚಿಸಲಾಗಿದೆ.

ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರು ಅದೇಶ ಮಾಡಿದ್ದರು.

ಸಾಮರ್ಥ್ಯ ಪರೀಕ್ಷೆ ‌ನಡೆಸಿ ವರದಿ ನೀಡಿದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಎಂದು ಅವರ ಅದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಅದರೆ ಈ ಭಾಗದ ಜನರ ಒತ್ತಾಯದ ಮೇರೆಗೆ ಸ್ಥಳೀಯ ಪುರಸಭಾ ಸದಸ್ಯರ ಮನವಿಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ‌ನಿರ್ಣಯ ಮಾಡಿ ಯಥಾಸ್ಥಿತಿಯಲ್ಲಿ ಇರುವಂತೆ ಕೋರಲಾಗಿತ್ತು.ಹಾಗಾಗಿ ವರದಿಗೂ ಮುನ್ನವೇ ಲಘ ವಾಹನಗಳು ನಿರ್ಬಂಧವಿಲ್ಲದೆ ಓಡಾಟ ನಡೆಸುತ್ತಿದ್ದವು.

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎನ್.ಐ.ಟಿ.ಕೆ.ಅಧಿಕಾರಿಗಳು ಬೇಟಿ ನೀಡಿ ಪರೀಕ್ಷೆ ನಡೆಸಿ‌ ವರದಿ ನೀಡಿದ್ದಾರೆ.

More from the blog

ಬಂಟ್ವಾಳ ತಾಲೂಕು ಪ್ರಾ. ಕೃ. ಪ. ಸ. ಸಂಘಗಳ ಒಕ್ಕೂಟದ ವತಿಯಿಂದ ಗೌರವ ಅಭಿನಂದನಾ ಕಾರ್ಯಕ್ರಮ..

ಬಂಟ್ವಾಳ : ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಮಣಿನಾಲ್ಕೂರು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ, ಕಜೆಕಾರು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ, ಇಡ್ಕಿದು ಸಹಕಾರಿ ಸಂಘದ...

Accident : ಡಿವೈಡರ್ ಗೆ ಡಿಕ್ಕಿಯಾದ ಕಾರು : ಚಾಲಕ ಸಾವು..

ಬಂಟ್ವಾಳ : ಕಾರೊಂದು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಳಗಿನ ತುಂಬೆ ಎಂಬಲ್ಲಿ ಶನಿವಾರ ಮದ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಪಾವೂರು ನಿವಾಸಿ ನೌಫಲ್...

Bantwal : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ – ಸುಮೋಟೋ ಕೇಸ್ ದಾಖಲು

ಬಂಟ್ವಾಳ: ಸಾಮಾಜಿಕ ಜಾಲತಾಣವಾದ watsapp ನಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿ ಸಾರ್ವಜನಿಕರಿಗೆ ಭಯಬೀತಿಯನ್ನುಂಟು ಮಾಡಿ ಸಾರ್ವಜನಿಕ ನೆಮ್ಮದಿ ಕೆಡಿಸುವ ಮಟ್ಟಿಗೆ ಅಪರಾಧ ಮಾಡಿರುವ ವ್ಯಕ್ತಿಯ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ...

Agriculture : ‘ರಥಬೀದಿ ಜವನೆರ್’ ತಂಡದ ಸದಸ್ಯರಿಂದ ಭತ್ತದ ನಾಟಿ..

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಾ ಬರುವ ಕಾಲಘಟ್ಟದಲ್ಲಿ ಯುವಕರ ತಂಡವೊಂದು ಸಮಾಜ ಸೇವೆಯ ಉದ್ದೇಶದಿಂದ ಭತ್ತದ ನಾಟಿಯನ್ನು ಮಾಡಿ ಗ್ರಾಮದಲ್ಲಿ ಗಮನ ಸೆಳೆದಿದ್ದಾರೆ. "ರಥಬೀದಿ ಜವನೆರ್ " ಎಂಬ ಹೆಸರಿನ ಸುಮಾರು 15...