Monday, February 2, 2026

ಮಾ.3-12: ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಶ್ರೀಗಣಪತಿ, ಶ್ರೀ ದುರ್ಗಾ ಸಾನಿಧ್ಯಗಳ ಪುನಃಪ್ರತಿಷ್ಠೆ, ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ

ಬಂಟ್ವಾಳ: ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಶ್ರೀಗಣಪತಿ, ಶ್ರೀ ದುರ್ಗಾ ಸಾನಿಧ್ಯಗಳ ಪುನಃಪ್ರತಿಷ್ಠೆಯೊಂದಿಗೆ ಭಯಂಕೇಶ್ವರ ಸದಾಶಿವ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಾ.3ರಿಂದ ಮೊದಲ್ಗೊಂಡು ಮಾ.12ರವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರಕಳ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಮಾ.5ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ದೊಂಪದಬಲಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳುತ್ತದೆ ಎಂದರು. ಮಾ.7ರಂದು ಬಿಂಬಪ್ರತಿಷ್ಠೆ, ಮಾ.8ರಂದು ಬೆಳಗ್ಗೆ ಬ್ರಹ್ಮಕಲಶಾಬಿಷೇಕ ನಡೆಯುವುದು. ಬಳಿಕ ಜಾತ್ರೋತ್ಸವಗಳು ಆರಂಭಗೊಂಡು, ಮಾ.12ರವರೆಗೆ ನಡೆಯಲಿದೆ. ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನೃತ್ಯಭಜನೆಯೂ ಇರಲಿದೆ ಎಂದರು.

ಮಾ.5ರಂದು ನರಿಕೊಂಬು ಗ್ರಾಮದ ಗುತ್ತಿನ ನಾಲ್ಕು ಮನೆಯವರಿಂದ ದೀಪ ಪ್ರಜ್ವಲನೆಯೊಂದಿಗೆ ಉಗ್ರಾಣ ಮುಹೂರ್ತ ನೆರವೇರಲಿದೆ, ಬಳಿಕ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದೀಪ ಪ್ರಜ್ವಲನೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ದೊಂಪದಬಳಿಯ ನಾಲ್ಕೈತ್ತಾಯ ದೈವಸ್ಥಾನದಿಂದ ಆರಂಭಗೊಂಡು, ಮೊಗರ್ನಾಡಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕುರ್ಚಿಪಲ್ಲ, ಸತ್ಯದೇವತೆ ಕಲ್ಲುರ್ಟಿ ದೇವಸ್ಥಾನ, ಪಾಣೆಮಂಗಳೂರು ವೀರವಿಠಲ ದೇವಸ್ಥಾನದತ್ತ ಸಾಗಿ ಶ್ರೀ ಭಯಂಕೇಶ್ವರ ದೇವಸ್ಥಾನ ತಲುಪಲಿದೆ ಎಂದರು.

ಜಾತ್ರೋತ್ಸವದ ಪ್ರತಿದಿನವೂ ಮಧ್ಯಾಹ್ನ ರಾತ್ರಿ ಊಟೋಪಚಾರ ಸಹಿತ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಪ್ರತಿದಿನ ಭಗವದ್ಗೀತಾ ಪ್ರವಚನವೂ ಇರಲಿದೆ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ರಘುನಾಥ ಸೋಮಯಾಜಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಡಾ. ಎಂ.ಮೋಹನ ಆಳ್ವ, ಅಧ್ಯಕ್ಷರಾಗಿ ಜಗನ್ನಾಥ ಬಂಗೇರ, ಕಾರ್ಯಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇತೃತ್ವದಲ್ಲಿ ವಿವಿಧ ಸಮಿತಿ ಕಾರ್ಯಾಚರಿಸುತ್ತಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾಹಿತಿ ನೀಡಿದರು. ಪ್ರಮುಖರಾದ ಪ್ರಕಾಶ್ ಕಾರಂತ ನರಿಕೊಂಬು, ರಘು ಸಫಲ್ಯ, ಲೋಕೇಶ್ ಕೆ ನರಹರಿನಗರ, ಪದ್ಮನಾಭ ಮಯ್ಯ ಏಲಬೆ, ಬಿ.ರಾಮಚಂದ್ರ ರಾವ್, ಭುವನೇಶ್, ಚಂದ್ರಾವತಿ ರತ್ನಾಕರ ನಾಯ್ಕ್, ಗೋವಿಂದ ಪೈ, ಪುರುಷೋತ್ತಮ ಸಾಲಿಯಾನ ನರಿಕೊಂಬು, ಪ್ರೇಮನಾಥ ಶೆಟ್ಟಿ ಅಂತರ ಮತ್ತಿತರರು ಉಪಸ್ಥಿತರಿದ್ದರು.

More from the blog

ಕೇಂದ್ರ ಬಜೆಟ್ 2026-27: ಸರ್ವೋದಯದ ಸಕಾರಾತ್ಮಕ ಬಜೆಟ್..

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ನ್ನು ಮಂಡಿಸಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. "ವಿಕಸಿತ ಭಾರತ" ದ ಮಹಾತ್ವಾಕಾಂಕ್ಷೆಯನ್ನು...

Bantwal : ನೀರು ಕೇಳುವ ನೆಪದಲ್ಲಿ ವೃದ್ಧೆಯ ಕರಿಮಣಿ ಸರ ಎಗರಿಸಿದ ಕಳ್ಳ – ಪ್ರಕರಣ ದಾಖಲು

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವ ನೀರು ಕೇಳುವ ನೆಪದಲ್ಲಿ ವೃದ್ಧ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಕರಿಮಣಿ ಸರವನ್ನು ಎಳೆದೊಯ್ದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ವಗ್ಗದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಗ್ಗ ಸಮೀಪದ...

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...