Tuesday, January 27, 2026

ಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಪೋರ್ಸ್ ಸಭೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡದ ಕುರಿತು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಭೆ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು, ಬುಧವಾರದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗಿದೆ.
ತಾಲೂಕಿನಲ್ಲಿ 48 ಗ್ರಾಮ ಪಂಚಾಯಿತಿಗಳಿದ್ದು, 21 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿ ಕಅಂತರ ಹಾಗೂ ಸರಕಾರದ ಆದೇಶದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಸಭೆ ನಡೆಸಲಾಗಿದೆ.
ಬುಧವಾರದಂದು ಅಳದಂಗಡಿ ಮತ್ತು ಸುಲ್ಕೇರಿ, ನಾರಾವಿ, ಅಂಡಿಂಜೆ, ಮರೋಡಿ, ಕಾಶಿಪಟ್ನ, ಹೊಸಂಗಡಿ, ಆರಂಬೋಡಿ, ವೇಣೂರು, ಕುಕ್ಕೇಡಿ, ಪಡಂಗಡಿ ಸೇರಿದಂತೆ 11 ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲಾಗಿದೆ.


ಗುರುವಾರದಂದು ಮೇಲಂತಬೆಟ್ಟು, ಶಿರ್ಲಾಲು, ಬಳೆಂಜ, ಕುವೆಟ್ಟು, ಮಾಲಾಡಿ, ಮಡಂತ್ಯಾರು, ಮಚ್ಚಿನ, ತಣ್ಣೀರುಪಂತ, ತೆಕ್ಕಾರು, ಬಾರ್ಯ 10 ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾ.ಪಂ. ಇಒ ಕೆ.ಇ. ಜಯರಾಮ್, ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್‍ನ ಸಮಿತಿಯ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಪಿಡಿಒಗಳು, ವಿಎಗಳು ಭಾಗವಹಿಸಿದ್ದರು.

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...