ಬಂಟ್ವಾಳ: ಮಂಗಳವಾರ ಕರೋಪಾಡಿ ಗ್ರಾಮ ಪಂಚಾಯತ್ ವಲಯದ ಪಂಚಾಯತ್ ಮಿಲನ ಕಾರ್ಯಕ್ರಮ 2019 ಮಿತ್ತನ್ನಡ್ಕ ಜಂಕ್ಷನ್‌ನಲ್ಲಿ ನಡೆಯಿತು. ಮಾಜಿ ಸಚಿವರು ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಒಗ್ಗಟ್ಟಿನಿಂದ ನಾವೆಲ್ಲರೂ ದುಡಿಯಬೇಕಾಗಿದೆ ಎಂದು ವಿನಂತಿಸಿದರು. ಪಕ್ಷ ಸಂಘಟನೆ ಹಾಗೂ ಬಲವರ್ಧನೆಯಲ್ಲಿ ಯುವಕರನ್ನೊಳಗೊಂಡ ತಂಡವನ್ನು ರಚಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ತಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸೋಲಿನ ಬಗ್ಗೆ ಪರಮಾವರ್ಶಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಎಮ್.ಎಸ್ ಮಹಮ್ಮದ್ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ತಾಲೂಕು ಪಂಚಾಯಾತ್ ಸದಸ್ಯರಾದ ಉಸ್ಮಾನ್ ಕರೋಪಾಡಿ ಮುಖಂಡರಾದ ಇದಿನಬ್ಬ ಕಲ್ಲಡ್ಕ, ಸಿದಿಕ್ ಸೆರಾವು,ಕುಂಞಣ್ಣ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ವಲಯ ಅಧ್ಯಕ್ಷರಾದ ಸೀತರಾಮ್ ಭಟ್ ಸ್ವಾಗತಿಸಿ ಅನ್ವರ್ ಕರೋಪಾಡಿ ವಂದನಾರ್ಪಣೆ ಮಾಡಿದರು.

