ಪುಂಜಾಲಕಟ್ಟೆ ಬಸವನಗುಡಿ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಪಾಂಗಲ್ಪಾಡಿ ಉದಯ ಪಾಂಗಣ್ಣಾಯ ತಂತ್ರಿಯವರ ನೇತೃತ್ವದಲ್ಲಿ 30ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಮಾ.19 ರಿಂದ ಮಾ.20 ರವರೆಗೆ ನಡೆಯಲಿದೆ.

ಮಾರ್ಚ್ 19 ರಂದು ಮಂಗಳವಾರ ಪೂರ್ವಾಹ್ನ 9 ಗಂಟೆಗೆ ಉಗ್ರಾಣ ಮುಹೂರ್ತ, ಗೊನೆ ಕಡಿಯುವುದು, ಸಂಜೆ ಗಂಟೆ 6.30ಕ್ಕೆ : ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ರಾಕ್ಷೋಘ್ನಹೋಮ, ವಾಸ್ತುಪೂಜೆ, ವಾಸ್ತುಬಲಿ ಪ್ರಸನ್ನ ಪೂಜೆ ನಡೆಯಲಿದೆ.
ಮಾರ್ಚ್ 20ರಂದು ಬುಧವಾರ ಬೆಳಿಗ್ಗೆ: ಗಣಹೋಮ, ಏಕದಶರುದ್ರಾಭಿಷೇಕ, ನವಕಲಶ ಪ್ರಧಾನಹೋಮ, ಆಶ್ಲೇಷ ಬಲಿ. ಮಧ್ಯಾಹ್ನ: ಮಹಾಪೂಜೆ, ಪ್ರಸಾದ ವಿತರಣೆ, ದಾನಿಗಳಿಂದ ಅನ್ನಸಂತರ್ಪಣೆ. ರಾತ್ರಿ : ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರವು ಬೈಲೊರ್ದುಗುತ್ತು ಭಂಡಾರದ ಕೊಟ್ಯದಿಂದ, ಪರಿವಾರ ದೈವಗಳ ಭಂಡಾರವು ಕೊಯಕ್ಕೂರಿ ಗುತ್ತಿನಿಂದ ಆಗಮನ. ರಾತ್ರಿ ಗಂಟೆ 8.30ಕ್ಕೆ : ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಜರಗಲಿರುವುದು.
ರಾತ್ರಿ ಗಂಟೆ 9.00ಕ್ಕೆ : ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿರುವುದು. ಬಳಿಕ ದೈವಗಳ ಗಂಧ ಪ್ರಸಾದ ನೀಡಲಾಗುವುದು.
ಮಾರ್ಚ್ 21 ರಂದು ಗುರುವಾರ ಸಂಪ್ರೋಕ್ಷಣೆ, ಕಲಶ, ಮಹಾಮಂಗಳಾರತಿ, ಮಂತ್ರಾಕ್ಷತೆಯೊಂದಿಗೆ ಮಂಗಳ ಜರಗಲಿರುವುದು.