ಬಂಟ್ವಾಳ: ಪಲ್ಗುಣಿ ನದಿಗೆ ಸ್ನಾನ ಮಾಡಲು ಹೋದವರು ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಂಡಶಾಲೆ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಅರಳ ಗ್ರಾಮದ ತಡ್ಯಾಳ ನಿವಾಸಿ ತಿಮ್ಮಪ್ಪ ಪೂಜಾರಿ (70) ಮೃತಪಟ್ಟ ವ್ಯಕ್ತಿ.
ಅವರು ಮೊಮ್ಮಗ ನಿತಿನ್ ಅವರ ಜೊತೆ ಬಂಡಶಾಲೆ ಪಲ್ಗುಣಿ ನದಿಗೆ ಬೆಳಿಗ್ಗೆ ಸ್ನಾನ ಮಾಡಲೆಂದು ಹೋಗಿದ್ದರು.
ಅವರು ಮೊಮ್ಮಗ ನ ಜೊತೆ ಹೋದವರು ಸ್ನಾನ ಮಾಡಲೆಂದು ನೀರಿಗೆ ಇಳಿದ ಕೂಡಲೇ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಆತ ಮನೆಗೆ ಓಡಿ ಬಂದು ತಿಳಿಸಿದ್ದಾನೆ.
ಮನೆಯವರು ಸ್ಥಳಕ್ಕೆ ಅಗಮಿಸಿ ಸ್ಥಳೀಯ ಈಜುಗಾರರ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿದ ವೇಳೆ ಇವರ ಮೃತ ದೇಹ ಪತ್ತೆಯಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ














