ವಿಟ್ಲ: ಮಾಣಿಲ ಗ್ರಾಮದ ಪಕಳಕುಂಜ ಶ್ರೀ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಶೈಕ್ಷಣಿಕ ವರ್ಷದ ಸಾಲಿನ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಪಕಳಕುಂಜ ಗೋಪಾಲಕೃಷ್ಣ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಟಿ.ತಾರಾನಾಥ ಕೊಟ್ಟಾರಿ, ಬೆಂಗಳೂರು ಸೂಪರ್ ರಾಯಲ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್ನ ಜೀವನ್ ಪಕ್ಕಲ, ಪಕಳಕುಂಜ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಎಂ.ಪಿ ಸುಶೀಲ, ಮಾಣಿಲ ಗ್ರಾ.ಪಂ. ಉಪಾಧ್ಯಕ್ಷೆ ವಿಶಾಲಾಕ್ಷಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಿವೇದಿತಾ ಕೆ ಭಟ್, ಮಾಣಿಮೂಲೆ ಇವರು ಉಪಸ್ಥಿತರಿದ್ದರು.
ಗೌರವ ಶಿಕ್ಷಕಿ ದಯಾಮಣಿ ಬಾಳೆಕಾನ ಸ್ವಾಗತಿಸಿದರು. ದಿವ್ಯಲಕ್ಷ್ಮೀ ಹಾಗೂ ನವ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಮದನ್ ಮೋಹನ್ ಶೆಟ್ಟಿ ಎಸ್. ಪಡಿಬಾಗಿಲು ವಂದಿಸಿದರು. ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ, ಹಳೆ ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯ ವಿನೋದಾವಳಿಗಳು ನಡೆದವು. ರಂಗಕಲಾವಿದ ಡಿ.ಎನ್.ಕೆ ಉಕ್ಕುಡ ಇವರ ನಿರ್ದೇಶನದಲ್ಲಿ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
