ಮಂಗಳೂರು : ಕುದ್ರೋಳಿ ದೇವಸ್ಥಾನದ ಸಭಾಂಗಣದಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಟ್ರಸ್ಟ್ (ರಿ ) ಇದರ ಪಡುಮಲೆಯ ಬ್ರಹ್ಮಕಲಶ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕರೆಯಲಾಯಿತು.



ಟ್ರಸ್ಟ್ ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಕಾರ್ಯಕ್ರಮದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸಮಿತಿಯ ಇತರ ಸದಸ್ಯರು ಮತ್ತು ಹಲವಾರು ಹಿತೈಷಿಗಳು ಸಭೆಯಲ್ಲಿ ಭಾಗವಹಿಸಿದ್ದರು.












