ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವ ಕ್ಷೇತ್ರದ ತಂತ್ರಿಗಳಾದ ವೇ.ಮೂ. ಶ್ರೀಪಾದ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರ.ಅರ್ಚಕ ಅನಂತ ಮಹಿಮ ಮುಚ್ಚಿಂತಾಯ ಅವರ ಪೌರೋಗಹಿತ್ಯದಲ್ಲಿ ಫೆ.25ರಿಂದ ಫೆ.29ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಫೆ.25ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಧ್ವಜಾರೋಹಣ, ಭಜನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.26ರಂದು ತ್ರಿಕಾಲ ಉತ್ಸವ, ರಾತ್ರಿ ಬಲಿ ಉತ್ಸವ, ಭಜನೆ, ರಾತ್ರಿ ಧಾರ್ಮಿಕ ಸಭೆ, ತುಳು ನಾಟಕ ಸಂಕಲೆ ಪ್ರದರ್ಶನ ನಡೆಯಲಿದೆ. ಫೆ.27ರಂದು ಉತ್ಸವಗಳು, ಭಜನೆ , ರಾತ್ರಿ ಅಜ್ಜನ ಪಜ್ಜೆ ಯಕ್ಷಗಾನ ನಡೆಯಲಿದೆ. ಫೆ.೨೮ರಂದು ದರ್ಶನ ಬಲಿ, ಭಜನೆ, ಕವಾಟ ಬಂಧನ, ಕಟೀಲು ಮೇಳದವರಿಂದ ಕಲ್ಯಾಣತ್ರಯ ಯಕ್ಷಗಾನ ನಡೆಯಲಿದೆ. ಫೆ.೨೯ರಂದು ಚಂಡಿಕಾ ಯಾಗ, ತುಲಾಭಾರ ಸೇವೆ, ರಾತ್ರಿ ದೈವಗಳಿಗೆ ನೇಮೋತ್ಸವ, ಮಹಾರಥೋತ್ಸವ, ಧ್ವಜಾವರೋಹಣ, ಪಾವಂಜೆ ಮೇಳದವರಿಂದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾ.1ರಂದು ರಂಗ ಪೂಜೆ, ಸಂಪ್ರೋಕ್ಷಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಕಲ್ಲಕೊಡಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.