Wednesday, February 4, 2026

ಸ್ನೇಹಿತನ ಜೊತೆ ಪಬ್ ಜೀ ಆಡಲು ಹೋದ ಬಾಲಕ ಶವವಾಗಿ ಪತ್ತೆ

ಮಂಗಳೂರು: ಪಬ್ ಜೀ ಆಟದಲ್ಲಿ ಯಾವಾಗಲೂ ಗೆಲ್ಲುತ್ತಿದ್ದ 12 ಬಾಲಕ ತನ್ನ ಸ್ನೇಹಿತನಿಂದಲೇ ಹತ್ಯೆಯಾದ ಭೀಕರ ಘಟನೆ ಮಂಗಳೂರು ಹೊರವಲದಯ ಉಳ್ಳಾಲದ ಕೆಸಿ. ರಸ್ತೆಯಲ್ಲಿ ನಡೆದಿದೆ.

12 ವರ್ಷದ ಬಾಲಕ ಆಕೀಫ್ ಹತ್ಯೆಯಾಗಿದ್ದು, 17 ವರ್ಷದ ಸ್ನೇಹಿತ ದೀಪಕ್ ಹತ್ಯೆ ಮಾಡಿದ್ದಾನೆ.

ಕೆಲ ತಿಂಗಳುಗಳಿಂದ ಇಬ್ಬರು ಸ್ನೇಹಿತರು ಒಟ್ಟಿಗೆ ಪಬ್ ಜೀ ಆಡುತ್ತಿದ್ದರು.ಆಟದಲ್ಲಿ ಪ್ರತಿಬಾರಿ ಆಕೀಫ್ ಗೆಲ್ಲುತ್ತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಅಂತ ಇಬ್ಬರ ನಡುವೆ ಗಲಾಟೆಯಾಗುತಿತ್ತು. ಶನಿವಾರ ರಾತ್ರಿ ಇಬ್ಬರು ಮೈದಾನದಲ್ಲಿ ಜೊತೆಯಾಗಿ ಆಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಆಟದಲ್ಲಿ ಮೊದಲ ಬಾರಿ ಸೋತಿದ್ದ ಆಕೀಫ್ ಮತ್ತು ದೀಪಕ್ ನಡುವೆ ಜಗಳ ಆರಂಭವಾಗಿದ್ದು, ಕಲ್ಲಿನಿಂದ ಹೊಡೆದಾಟದವರೆಗೆ ಮುಂದುವರಿಯಿತು. ಈ ವೇಳೆ ಸಿಟ್ಟಿಗೆದ್ದ ದೀಪಕ್ ದೊಡ್ಡ ಕಲ್ಲು ಎತ್ತಿ ಆಕೀಫ್ ಮೇಲೆ ಹಾಕಿದ್ದಾನೆ. ಇದರಿಂದ ಆಕೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೈದಾನದ ಬದಿಯಲ್ಲಿ ಶವವನ್ನು ಹಾಕಿ ದೀಪಕ್ ಪರಾರಿಯಾಗಿದ್ದ. ಬೆಳಗ್ಗೆ ಆಕೀಫ್ ಶವ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ದೀಪಕ್ ತಪ್ಪೊಪ್ಪಿಕೊಂಡಿದ್ದಾನೆ.

ದೀಪಕ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...