ಬಂಟ್ವಾಳ: ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಪುನರ್ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನದಲ್ಲಿ ಜೀರ್ಣೊದ್ಧಾರ ಕಾರ್ಯ ಪೂರ್ವಭಾವಿಯಾಗಿ ಆಶ್ಲೇಷಬಲಿ ಪೂಜೆ ಎ.21ರಂದು ನಡೆಯಿತು.


ಗ್ರಾಮದ ತಂತ್ರಿಗಳಾದ ವೇ.ಮೂ. ಬಾಲಕೃಷ್ಣ ಪಾಂಗಣ್ಣಾಯ ಅವರ ಪೌರೋಹಿತ್ಯದಲ್ಲಿ ವೇ.ಮೂ. ಉದಯ ಪಾಂಗಣ್ಣಾಯ ಹಾಗೂ ಪ್ರ. ಅರ್ಚಕ ಗೋಪಾಲಕೃಷ್ಣ ಭಟ್ ಅವರ ಸಹಕಾರದಲ್ಲಿ ಧಾರ್ಮಿಕ ವಿಧಾನಗಳು ನಡೆಯಿತು.
ಅಡಳಿತ ಮಂಡಳಿಯ ಅಧ್ಯಕ್ಷ ಯು.ಎಸ್. ಚಂದ್ರಶೇಖರ ಭಟ್, ಪ್ರ. ಕಾರ್ಯದರ್ಶಿ ಡಾ. ರಾಮಕೃಷ್ಣ ಎಸ್., ಗೌರವಾಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಡಾ. ಶಿವಪ್ರಸಾದ್ ಭಟ್ ಸನಂಗುಳಿ ಕೊರಗ ಶೆಟ್ಟಿ ಬಂಗೇರೆಕೆರೆ, ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರ್, ಪ್ರ. ಕಾರ್ಯದರ್ಶಿ ದಯಾನಂದ ಎಸ್. ಎರ್ಮೆನಾಡು, ಉಮೇಶ್ ಮೂಲ್ಯ ಸೇವಾ, ಶೀನ ಶೆಟ್ಟಿ ಕಜೆಕೋಡಿ, ಅರುಣ್ ಶೆಟ್ಟಿ ಕಜೆಕೋಡಿ, ಕಾಂತಪ್ಪ ಕಜೆಕೋಡಿ, ಪ್ರಶಾಂತ್ ಜೈನ್ ಸೇವಾ, ಯಕ್ಷಿತ್ ಗೌಡ, ಲೋಕನಾಥ ಶೆಟ್ಟಿ ನರ್ವಲ್ದಡ್ಡ ಮತ್ತಿತರರು ಉಪಸ್ಥಿತರಿದ್ದರು.












