Monday, January 26, 2026

ಬಿಜೆಪಿ ಹಿರಿಯ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ : ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭಾವುಕರಾಗಿ ಮಾತನಾಡಿದ ಮಾಜಿ ಶಾಸಕ ರುಕ್ಮಯ ಪೂಜಾರಿ.

ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಹಾಗೂ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ, ಹಿರಿಯರಾಗಿದ್ದುಕೊಂಡು, ನೆನಪುಗಳನ್ನು ಮರುಕಳಿಸಲು ಪ್ರೇರಣೆ ನೀಡಿ, ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿದ ಮಂಡಲದ ವಿಶೇಷ ಕಾರ್ಯಕ್ರಮ, ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಹೇಳಿದರು.

ಅವರು ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾರ್ಮ್ ಹೌಸನಲ್ಲಿ ಬಂಟ್ವಾಳ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಟದ ವತಿಯಿಂದ , ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದ ದಲ್ಲಿ ನಡೆದ ಬಿಜೆಪಿ ಹಿರಿಯ ಕಾರ್ಯಕರ್ತ ರ ಸಮ್ಮಿಲ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಹಿರಿಯರ ಪರಿಶ್ರಮದ ಫಲವಾಗಿ ಪಕ್ಷ ಸದೃಢ ಹೆಜ್ಜೆಯನ್ನು ಇಡಲು ಸಾಧ್ಯವಾಯಿತು. ಸ್ವತಂತ್ರ ದೇಶದಲ್ಲಿ ಬದುಕಬೇಕು ಎಂಬ ನಿಟ್ಟಿನಲ್ಲಿ ಜೀವ ತೆತ್ತ ಅನೇಕ ಹಿರಿಯರ ಪ್ರಯತ್ನ ದ ಫಲವಾಗಿ , ಇಂದಿನ ಸಂಸ್ಕಾರ, ಸಂಸ್ಕೃತಿಗಳ,ಆಚಾರ ವಿಚಾರಗಳ ಉಳಿವಿಗೋಸ್ಕರ ಶ್ರಮಿಸಿದ ಸ್ವಯಂಸೇವಕ ಸಂಘದ ಹಿರಿಯ ಜೀವಗಳ ಸಾಧನೆಯೆ ಭವ್ಯ ಭಾರತಕ್ಕೆ ಸಾಕ್ಷಿಯಾಗಿದೆ.

ತುರ್ತುಸ್ಥಿತಿ, ರಾಮಜನ್ಮ ಭೂಮಿ ಹೀಗೆ ಅನೇಕ ರೀತಿಯಲ್ಲಿ ದೇಶದ ಭದ್ರತೆಗಾಗಿ , ದೇಶದ ಪರಂಪರೆಗಾಗಿ ಹೋರಾಡಿದ ಹಿರಿಯರ ನೆನಪು ಮಾಡಲೇಬೇಕು ಎಂದರು. ಭಾರತ ಮಾತೆಯನ್ನು ಜಗನ್ಮಾತೆಯನ್ನಾಗಿ ಮಾಡುವುದು ಬಿಜೆಪಿ ಸಂಕಲ್ಪವಾಗಿದ್ದು , ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.  ವಿಚಾರದ ನಂಬಿಕೆ , ಹಿರಿಯ ನಿರ್ಣಯದ ನಂಬಿಕೆ, ಹಿರಿಯರ ಅನುಭವ , ಜನರ ಮಧ್ಯೆ ಓಡಾಟ ದ ಕಾರಣಕ್ಕಾಗಿ ಬಿಜೆಪಿ ಭದ್ರವಾಗಿ ಬೇರೂರಿದೆ ಎಂದು ಅವರು ಹೇಳಿದರು. ಸ್ವಂತಕ್ಕೆ ಏನಿಲ್ಲದೆ, ಸಮಾಜಕೋಸ್ಕರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಕ್ಕಾಗಿ ,ತನ್ನ ಜೀವನನ್ನು ಮುಡಿಪಾಗಿಟ್ಟ , ಹಿರಿಯರ ತಪಸ್ಸಿನ ಫಲವಾಗಿ ಬಿಜೆಪಿ ಎಂಬ ವೃಕ್ಷ ಭವ್ಯವಾಗಿ ಬೆಳೆದಿದೆ. ಮುಂದಿನ 2023 ಹಾಗೂ 2024 ರಲ್ಲಿ ನಡೆಯುವ ಚುನಾವಣೆ, ದೇಶದ ಸ್ಥಿರವಾಗುವ ನಿಟ್ಟಿನಲ್ಲಿ ನಿರ್ಣಾಯಕ ಹಂತವನ್ನು ತಲುಪುವ ಚುನಾವಣೆ ಯಾಗಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿಬೇಕು, ಈ ನಿಟ್ಟಿನಲ್ಲಿ ಹಿರಿಯರಾದ ನಾವೆಲ್ಲರೂ ಪಕ್ಷಕ್ಕೊಸ್ಕರ ಒಂದಾಗಿ ಗೆಲುವಿಗಾಗಿ ನಾವು ಶ್ರಮಿಸೋಣ ಎಂದು ಅವರು ಮನವಿ ಮಾಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪ್ರಸ್ತಾವಿಕವಾಗಿ ಮಾತನಾಡಿ, ಎಲ್ಲಾ ಹಿರಿಯರನ್ನು ಗುರುತಿಸಿ ಗೌರವಿಸಬೇಕು ಎಂಬ ಕನಸಿನ ಯೋಜನೆ ಇಂದು ಸಕಾರಗೊಂಡಿದೆ. ಇಂದು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದ ಹಿರಿಯರನ್ನು ಮನೆಗೆ ಹೋಗಿ ಗೌರವಿಸುವ ಕೆಲಸ ಕಾರ್ಯಕರ್ತರ ಜೊತೆ ಸೇರಿಕೊಂಡು ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂಬ ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಪಕ್ಷಕ್ಕೆ ಶಕ್ತಿ ನೀಡುವ ಕಾರ್ಯವನ್ನು ನೀವು ಮಾಡಿದ್ದೀರಿ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಯನ್ನು ಪೂಜಾರಿ ವಹಿಸಿದ್ದ ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ನಾನು ಶಾಸಕ ಅಥವಾ ಬೇರೆ ಹುದ್ದೆಯನ್ನು ಅಲಂಕರಿಸಲು ಬಿಜೆಪಿ ಕಾರ್ಯಕರ್ತರಿಂದ ಮಾತ್ರ ಸಾಧ್ಯವಾಯಿತು ಎಂದು ಅವರು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೋಮ್ಮೆ ಬಿಜೆಪಿ ಜಯಭೇರಿ ಬಾರಿಸಬೇಕು, ಅದಕ್ಕೆ ಎಲ್ಲಾ ಹಿರಿಯ ಕಾರ್ಯಕರ್ತರ ಅಶ್ರೀವಾದ ಬೇಕು, ಜೊತೆಗೆ ಯುವ ಕಾರ್ಯಕರ್ತರು ಜತೆಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷ ಸುದರ್ಶನ ಮೂಡಿಬಿದರೆ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟ ಗಳಿಗೆ ಶಕ್ತಿ ನೀಡಿದ ಕ್ಷೇತ್ರ ಬಂಟ್ವಾಳವಾಗಿದೆ. ಕಲ್ಲಡ್ಕ ಡಾ! ಪ್ರಭಾಕರ್ ಭಟ್, ಹಾಗೂ ಕಮಲಾಪ್ರಭಾಕರ್ ಭಟ್ ಅವರು ಸಂಘಟನೆ ಗೆ ನೀಡಿದ ಸ್ಫೂರ್ತಿ, ಪ್ರೇರಣೆಯ ಫಲವಾಗಿ ಸಂಘಟನೆ ಸದೃಢ ವಾಗಿದೆ ಎಂದು ಅವರು ಹೇಳಿದರು. ಹಿರಿಯ ಕನಸು ನನಸಾಗುವ ಕಾಲಘಟ್ಟದಲ್ಲಿ ನಾವೆಲ್ಲ ಇದ್ದೇವೆ. ಆದರೆ ಜಗದ್ಗುರು ಭಾರತದ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ನಾಯಕರ ಹೋರಾಟಕ್ಕೆ ನಾವು ಜತೆಯಾಗಬೇಕು ಎಂದು ಅವರು ಹೇಳಿದರು. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ ಪಡೆಯಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಹಿರಿಯ ನಾಗರಿಕ ಪ್ರಕೋಷ್ಟದ ಸಂಚಾಲಕ ನಾರಾಯಣ ಗಟ್ಟಿ, ಸಂಚಾಲಕಾದ ರಾಮಕೃಷ್ಣ ಮಯ್ಯ, ಗೋಪಾಲ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ರಾಮ್ ದಾಸ ಬಂಟ್ವಾಳ, ಕಸ್ತೂರಿ ಪಂಜ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ,ಪ್ರಮುಖ ರಾದ ಸುಲೋಚನ ಜಿ.ಕೆ.ಭಟ್, ಕಮಲಾ ಭಟ್ ಕಲ್ಲಡ್ಕ, ಮಾದವ ಮಾವೆ ಉಪಸ್ಥಿತರಿದ್ದರು.

ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು. ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಂಟ್ವಾಳ ತಾಲೂಕಿನ ಸಾಧಕರನ್ನು ಗೌರವಿಸಿದರು.

ಬಾವುಕರಾದ ರುಕ್ಮಯ ಪೂಜಾರಿ

ಹಿರಿಯರಿಗೆ ಗೌರವ ನೀಡುವ ಕೆಲಸ ಆಗಿದೆ, ಇದು ನಿಜಕ್ಕೂ ಉತ್ತಮ ಕಾರ್ಯಕ್ರಮ ಇಂತಹ ಕಾರ್ಯಕ್ರಮ ಬಿಜೆಪಿಯಿಂದ ಮಾತ್ರ ನಡೆಯಲು ಸಾಧ್ಯ.. ಮತ್ತೆ ಪಕ್ಷಕ್ಕಾಗಿ ದುಡಿದ ಹಿರಿಯರು ಒಂದೇ ಸೂರಿನಡಿ ಸೇರಿಸಿ ನಮ್ಮ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಮಾಡಿದ ಶಾಸಕ ರಾಜೇಶ್ ಅವರಿಗೆ ಧನ್ಯವಾದ ನೀಡಿ ಬಾವುಕರಾದರು.

ಹಳೆಯ ನೆನಪುಗಳನ್ನು ಹೋರಾಟಗಳನ್ನು ತಿಳಿಸುತ್ತಾ ಭಾಷಣದ ಉದ್ದಕೂ ಭಾವುಕರಾಗಿ ಮಾತನಾಡಿ ಸೇರಿದ ಹಿರಿಯರ ಕಣ್ಣಿನಲ್ಲೂ ನೀರು ಬರಿಸಿದರು‌

ಕಾರ್ಯಕ್ರಮದ ವಿಶೇಷತೆ

ಹಿರಿಯ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತೆಯವರು ಆರತಿ ,ಹಣೆಗೆ ಕುಂಕುಮ ಹಾಗೂ ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು.

ಸಭಾಂಗಣಕ್ಕೆ ಪ್ರವೇಶ ಮಾಡುವ ಮೊದಲು ಹಿರಿಯರಿಗಾಗಿ ಬೆಲ್ಲ,ನೀರು, ಚಹಾ, ಪತ್ರೋಡೆ, ಶೀರಾ,ಅವಲಕ್ಕಿ, ಕಡುಬು , ಪುನರ್ ಪುಲಿ ಜ್ಯೂಸ್, ಕಡ್ಲೆ ಬಲ್ಯಾರು, ಕೋಳಿ ಸುಕ್ಕ, ಸೇವಿಗೆ ಕೋಳಿ ಸಾರ್, ಬಂಗುಡೆ ಗಸಿ ,ಅನ್ನ ಸಾಂಬಾರು ವಿಶೇಷವಾಗಿತ್ತು.ನಿರೀಕ್ಷೆಗೂ ಮೀರಿದ ಹಿರಿಯ ಕಾರ್ಯಕರ್ತರು ಸೇರಿದ್ದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...