ವಿಟ್ಲ: ಜೇಸೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ತರಗತಿ ಆರಂಭವಾಗಿದೆ. ಕೊರೋನಾ ಲಾಕ್‍ಡೌನ್‍ನಿಂದಾಗಿ ದೇಶ ವ್ಯಾಪಿಯಾಗಿ ಎದುರಿಸುತ್ತಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಾದ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಿಕೆ ಮತ್ತು ಶಾಲಾ ತರಗತಿಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಠಲ್ ಜೇಸೀಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯು ತಮ್ಮ ವಿದ್ಯಾರ್ಥಿಗಳಿಗೆ ಲಾಕ್‍ಡೌನ್‍ನಂತಹ ಈ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಯಲ್ಲಿದ್ದುಕೊಂಡು ಪಠ್ಯ ಕ್ರಮಗಳ ಅಭ್ಯಾಸ ನಡೆಸಲು ಆನ್‍ಲೈನ್ ತರಗತಿಗಳನ್ನು ಆರಂಭಿಸಿದೆ.

ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಸುಮಾರು 80% ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಕಾರದೊಂದಿಗೆ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಅಲ್ಲದೆ ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಥಮವಾಗಿ ಆನ್‍ಲೈನ್‍ನಂತಹ ಕಾರ್ಯಕ್ರಮ ಆಯೋಜಿಸಿರುವುದು ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಇತಿಹಾಸಕ್ಕೊಂದು ಗರಿಮೆಯಾಗಿದೆ. ವಿಟ್ಲ ಜೇಸೀಸ್ ಸಂಸ್ಥೆಯು ಲೀಡ್‍ಸ್ಕೂಲ್ ಸಂಸ್ಥೆಯ ಸಹಯೋಗದಿಂದ ನಡೆಸುತ್ತಿರುವ ಈ ಆನ್‍ಲೈನ್ ಪಠ್ಯಕ್ರಮವು ವಿಳಂಬವಾಗುತ್ತಿರುವ ಶೈಕ್ಷಣಿಕ ವರ್ಷಕ್ಕೆ ಪರಿಹಾರವನ್ನು ಒದಗಿಸಿದೆ.

