Tuesday, January 27, 2026

“ಒಂಜಿ ನಿಮಿಷ” ತುಳು ಕಿರುಚಿತ್ರ

ವಿಟ್ಲ: ದುರ್ಗಾ ಕ್ರಿಯೇಷನ್ಸ್ ನಿರ್ಮಾಣದ ಒಂಜಿ ನಿಮಿಷ ಎಂಬ ತುಳು ಕಿರುಚಿತ್ರ ಎ.20ರಂದು ಶ್ರೀ ದುರ್ಗಾಮಿತ್ರ ವೃಂದ ಮೈರ ಇದರ ವಾರ್ಷಿಕೋತ್ಸವದಂದು ಬಿಡುಗಡೆಗೊಂಡಿತು. ಇದರ ಬಿಡುಗಡೆಯನ್ನು ಕೆ. ಪಿ. ನಾಗರಾಜ್ (ಗೋಕರ್ಣನಾಥೇಶ್ವರ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಉಪನ್ಯಾಸಕರು) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ್ ಭಟ್, ವೃಂದದ ಅಧ್ಯಕ್ಷರಾದ ಅಶೋಕ ಎ ಇರಾಮೂಲೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಥೆ, ನಿರ್ದೇಶನ ಗೀತ ರಚನೆ ನಿತಿನ್ ಹೊಸಂಗಡಿ, ನಿರ್ಮಾಪಕ ಅಭಿ ಸಾಯ, ಗಾಯನ ಪ್ರವೀಣ್‌ಜಯ ವಿಟ್ಲ ಹಾಗೂ ಅಶ್ವಿನಿಶ್ರೇಯ ವಿಟ್ಲ, ಛಾಯಾಗ್ರಹಣ ಗೋಪಾಲಕೃಷ್ಣ ಅಡ್ಯನಡ್ಕ, ನೃತ್ಯ ನಿರ್ದೇಶನ ಪ್ರವೀಣ್ ರಾಜ್ ಅಡ್ಯನಡ್ಕ , ಸಂಕಲನ ಮೈತ್ರಿ ಡಿಜಿಟಲ್ಸ್ ಅಡ್ಯನಡ್ಕ , ಮೇಕಪ್ ರವಿ ಸಿಂಗೇರಿ, ಧ್ವನಿ ಮತ್ತು ಬೆಳಕು ಸಿಯಮ್ ಸೌಂಡ್ಸ್ ಅಡ್ಯನಡ್ಕ.
ಚಿತ್ರದಲ್ಲಿ ಶ್ರೇಯಸ್ ಪಾಟಾಳಿ ಕೇಪು, ದೀಕ್ಷಾ ಅಳಕೆಮಜಲು, ನಿತಿನ್ ಹೊಸಂಗಡಿ, ಹರ್ಷಿತಾ ಎನ್ ಹೊಸಂಗಡಿ, ರವಿ ಸಿಂಗೇರಿ, ತೇಜಸ್ವಿನಿ ಪುಣಚಾ, ಜಾಹ್ನವಿ, ಜಯಂತ್ ಕೇಪು ಅನಿಲ್ ಕೇಪು, ವಿನೋದ್ ಕೇಪು, ತೇಜಸ್ ಕೇಪು, ದೇವರಾಜ್ ಕೇಪು, ತೀರ್ಥೇಶ್ ಕೇಪು, ಅಭಿ ಸಾಯ ನಟಿಸಿದ್ದಾರೆ. ತ್ರಿಶೂಲ್ ಫ್ರೆಂಡ್ಸ್ ಕೇಪು, ಶ್ರೀ ದುರ್ಗಾಮಿತ್ರ ವೃಂದ ಮೈರ, ಪುಗರ್ತೆ ಕಲಾವಿದರು ಮೈರ ಸಹಕರಿಸಿದ್ದಾರೆ.

More from the blog

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...

ಕೊಡಾಜೆ : ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಕಾರ್ಯದರ್ಶಿ ಎಸ್.ಎಂ.ರಫೀಕ್...

ಕಟೀಲು 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.27ರ ಸೇವೆಯಾಟಗಳ ವಿವರ : ಆಡಳಿತ ಮಂಡಳಿ, ಶ್ರೀ ಮಹಾಗಣಪತಿ ದೇವಸ್ಥಾನ,...