Wednesday, February 12, 2025

ಒಡಿಯೂರು ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವ ಧರ್ಮ ಸಭೆ 

ವಿಟ್ಲ: ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಸೋಮವಾರ ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ಧರ್ಮ ಸಭೆ ನಡೆಯಿತು.

ಧರ್ಮ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಧ್ಯಾತ್ಮಿಕತೆಯೇ ಭಾರತದ ಅಂತ:ಸತ್ವವಾಗಿದ್ದು, ಧರ್ಮ ಅದರ ತಿರುಳಾಗಿದೆ. ಶಾಂತಿ ನೆಮ್ಮದಿ ನೆಲೆಸಲು ಆಧ್ಯಾತ್ಮದ ಅಗತ್ಯವಿದ್ದು, ಜ್ಞಾನದ ಹಸಿವು ನಿರಂತರವಾಗಿರಬೇಕು. ಜ್ಞಾನ ಮತ್ತು ಮಾನದ ಬಗ್ಗೆ ಎಚ್ಚರದಲ್ಲಿ ಇರಬೇಕಾಗಿದ್ದು, ಭಕ್ತಿಯೆಂಬ ಭಾವನಾತ್ಮಕ ಬೆಸುಗೆ ಇದ್ದಾಗ ಜೀವ ದೇವನ ಸೇರ್ಪಡೆಯಾಗುತ್ತದೆ. ಬದುಕಿನ ಭವಸಾಗರವನ್ನು ದಾಟಿಸುವ ಕೆಲಸ ರಾಮನಾಮದಿಂದ ನಡೆಯುತ್ತದೆ. ಕ್ಷೇತ್ರದ ಸಮೀಪದಲ್ಲಿ ಸಂಜೀವಿನಿ ವನ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ೧೦೮ ಅಡಿಯ ಹನುಮ ವಿಗ್ರಹ ನಿಲ್ಲಿಸುವ ಯೋಚನೆಯಿದೆ. ದೇಶ ಕಾಲ ಸ್ಥಿತಿಯನ್ನು ತಿಳಿದ ವ್ಯಕ್ತಿಗೆ ದೇಶದ ಆಡಳಿತ ನಡೆಸುವ ಶಕ್ತಿಯಿದೆ. ಅಧಿಕಾರದಲ್ಲಿ ದಕ್ಷತೆಯ ಅಗತ್ಯವಿದ್ದು, ದಾನದಿಂದ ಸಂಪತ್ತಿನ ಮೌಲ್ಯ ವರ್ಧನೆಯಾಗುತ್ತದೆ. ಪಂಚೇಂದ್ರಿಯಗಳನ್ನು ನಿಯಂತ್ರಣ ಮಾಡಿದಾಗ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ನಮ್ಮ ಬದುಕಿನ ತೇರನ್ನು ನಾವೇ ಎಳೆಯಬೇಕಿದ್ದು, ಆತ್ಮ ವಿಶ್ವಾಸ ಬಲ ನೀಡುತ್ತದೆ ಎಂದು ಹೇಳಿದರು.

ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಬಾಹ್ಯ ಸುಖಭೋಗಕ್ಕೆ ಕಡಿವಾಣ ಹಾಕಿ ಜೀವನವನ್ನು ಆಧ್ಯಾತ್ಮ ಪಥದಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ. ಜೀವನದಲ್ಲಿ ಉತ್ತಮ ಕಾರ್ಯ, ನಿಸ್ವಾರ್ಥ ಸೇವೆ, ಸತ್ಕಾರ್ಯವನ್ನು ಮಾಡಿ ಭಗವಂತನನ್ನು ಸೇರುವ ಕಾರ್ಯವಾಗಬೇಕು. ರಾಮ ಆದರ್ಶವನ್ನು ಪಾಲಿಸುವ ಮೂಲಕ ಧರ್ಮಯುತ ದಾರಿಯಲ್ಲಿ ಜೀವನ ನಡೆಸಬೇಕು. ರಾಮಾಯಣ ಮಹಾಭಾರತವನ್ನು ಆದರ್ಶ ಪಾಠವನ್ನು ನೀಡುತ್ತದೆ. ಹೊಂದಾಣಿಕೆಯ ಬದುಕಿನಲ್ಲಿ ಮುನ್ನಡೆದಾಗ ಜೀವನ ಸುಂದರವಾಗುತ್ತದೆ. ಧರ್ಮ ಸಂಸ್ಕೃತಿಯ ಮೂಲಕ ಸಾಗಿದಾಗ ನಾವು ಬೆಳಗುವ ಜತೆಗೆ ಸಮಾಜದ ಏಳಿಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಭಾಷೆ ಸಂಸ್ಕೃತಿಯ ಒಳಿತಿನ ಜತೆಗೆ ದೇವರ ಆರಾಧನೆ ಮಾಡುವ ಕೇಂದ್ರವಾಗಿ ಒಡಿಯೂರು ಕ್ಷೇತ್ರ ಮುನ್ನಡೆಯುತ್ತಿದೆ. ಸ್ವಸಹಾಯ ಸಂಘದ ಮೂಲಕ ಹಳ್ಳಿ ಹಳ್ಳಿಯಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ನಡೆಯುತ್ತಿದೆ. ಸ್ವಾಭಿಮಾನದ ಸಂಕೇತವಾಗಿ ಶ್ರೀರಾಮ ಮಂದಿರದ ಕರಸೇವಕರು ಕೆಲಸ ಕಾರ್ಯಗಳನ್ನು ನಡೆಸಿದ್ದಾರೆ. ತುಳು 8ನೇ ಪರಿಚ್ಛೇದಕ್ಕೆ ಸೇರುವ ನಿಟ್ಟಿನಲ್ಲಿ ಒಂದು ಹಂತದ ಕಾರ್ಯಗಳು ಪೂರ್ಣವಾಗಿದ್ದು, ಮುಂದಿನ ದಿನದಲ್ಲಿ ಸೇರಿಸುವ ಕಾರ್ಯವಾಗುತ್ತದೆ. ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಸ್ವೀಕಾರ ಮಾಡಬೇಕಾಗಿದ್ದು, ಕೇಂದ್ರದಿಂದ ಒತ್ತಡ ತರುವ ಕಾರ್ಯ ಮಾಡಲಾಗುವುದು. ಕಳೆದ 15 ವರ್ಷಗಳಲ್ಲಿ ಕ್ಷೇತ್ರಕ್ಕೆ ೯೩ ಸಾವಿರ ಕೋಟಿ ಅನುದಾನದ ಯೋಜನೆಗಳನ್ನು ಜಿಲ್ಲೆಗೆ ತರಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ಯಾನ – ಕರೋಪಾಡಿ ಗ್ರಾಮದಿಂದ ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿಯ ಕರಸೇವಕರನ್ನು ಗೌರವಿಸಲಾಯಿತು.

ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿದವರನ್ನು ಗುರುತಿಸುವ ಕಾರ್ಯ ನಡೆಯಿತು.

ಪುಣೆಯ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಮಹಾರಾಷ್ಟ್ರ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಿರಾರ್ ಶಂಕರ ಬಿ. ಶೆಟ್ಟಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಜಿ. ಎಲ್., ಶ್ರೀ ಒಡಿಯೂರು ರಥೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಬರೋಡಾ, ಉದ್ಯಮಿ ರವೀಂದ್ರನಾಥ ಆಳ್ವ ಮಲಾರುಬೀಡು, ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ, ಮುಂಬಯಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರದೀಪ್ ಶೆಟ್ಟಿ ಕೊಳಕೆಬೈಲ್ ಉಪಸ್ಥಿತರಿದ್ದರು.

ನಿತ್ಯಶ್ರೀ ಎಸ್. ರೈ, ನವ್ಯಶ್ರೀ ರೈ ಪ್ರಾರ್ಥಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕನ್ಯಾನ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಅಪರಾಹ್ನ ಸುಂದರಕಾಂಡ ವಾಚನ- ಪ್ರವಚನ ನಡೆಯಿತು. ಜಯಲಕ್ಷ್ಮೀ ಕಾರಂತ್ ವ್ಯಾಖ್ಯಾನ ನೀಡಿದರು. ದಿವ್ಯಾ ಕಾರಂತ್ ಕಾವ್ಯವಾಚನ ಮಾಡಿದರು‌. ಬಳಿಕ ಉರ್ವಚಿಲಿಂಬಿ ಶಿರಡಿ ಸಾಯಿಬಾಬಾ ಮಂದಿರದ ಸಾಯಿಶಕ್ತಿ ಕಲಾಬಳಗದಿಂದ ಬೊಳ್ಳಿಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...