Wednesday, February 12, 2025

ಒಡಿಯೂರಿನಲ್ಲಿ ಸಿರಿರಾಮೆ ತುಳುಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ರಥೋತ್ಸವ ತುಳುನಾಡ ಜಾತ್ರೆಯ ಸಂದರ್ಭದಲ್ಲಿ ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ ನಡೆಯಿತು.

‘ಸಿರಿರಾಮೆ’ ಸಮ್ಮೇಳನವನ್ನು ಉದ್ಘಾಟಿಸಿದ ಶ್ರೀ ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿ ಆನಂದದ ಸೆಲೆ ಅಂತಃಕರಣದಲ್ಲಿದೆ.

ಮರ್ಯಾದೆಗೆ ಮತ್ತೊಂದು ಹೆಸರೇ ಶ್ರೀರಾಮ. ರಾಮಾಯಣ ಬದುಕಿನ ಬೆಳಕು ಈ ಬೆಳಕಿನಡಿಯಲ್ಲಿ ಕೊಳಕು, ಕಲ್ಮಶಗಳು ತೊಳೆದು ಸಂತೃಪ್ತಿ ಯ ನಡೆ ನಮ್ಮದಾಗಬೇಕು. ವಿಶ್ವವೇ ಒಪ್ಪಿದ, ಮೆಚ್ಚಿದ ಮಹಾನ್ ಪುರುಷ ಶ್ರೀರಾಮನ

ಭವ್ಯ ಮಂದಿರದ ನಿರ್ಮಾಣ ಸಂದರ್ಭದಲ್ಲಿ ತ್ಯಾಗಮೂರ್ತಿ ಶ್ರೀರಾಮನ ಹೆಸರಿನಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತಿ , ಉಡುಪಿ ತುಳು ಕೂಟದ ಸಂಸ್ಥಾಪಕ ಡಾ. ಭಾಸ್ಕರಾನಂದ ಕುಮಾರ್ ಕಟೀಲ್ ಮಾತನಾಡಿ ಶ್ರೀರಾಮ ಆದರ್ಶ ವ್ಯಕ್ತಿ. ಆತನ ವ್ಯಕ್ತಿತವನ್ನು ಅಳವಡಿಕೆ ಮಾಡಿಕೊಂಡಾಗ ಜೀವನ ಸಾರ್ಥಕ. ಶ್ರೀರಾಮನ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಶ್ಲಾಘನೀಯ. ಒಡಿಯೂರು ತುಳು ಸಮ್ಮೇಳನದ ಕಿರೀಟ ತೊಡಿಸಿದ್ದಾರೆ. ತುಳು ಸಾಹಿತ್ಯಕ್ಕೆ ಸಾಧ್ಯವಾದ ಮಟ್ಟಿನ ಸೇವೆ ಸಲ್ಲಿಸಿದ್ದೇನೆ ಎಂದರು.

ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ ಮಾತನಾಡಿ, ತುಳು ಕರಾವಳಿಗರ ವ್ಯಾವಹಾರಿಕ ಭಾಷೆ. ಜಾತಿಮತ ಭೇಧವಿಲ್ಲದೇ ಎಲ್ಲರೂ ತುಳು ಬಳಕೆ ಮಾಡುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳುನಾಡು ಎಂದೇ ಪ್ರಸಿದ್ಧಿ ಆಗಿದೆ ಎಂದರು.

ಉದ್ಯಮಿ‌ ಶ್ರೀಧರ ಶೆಟ್ಟಿ ಗುಬ್ಯಗುತ್ತು ಶುಭ ಹಾರೈಸಿದರು. ವೇದಿಕೆಯಲ್ಲಿ ಒಡಿಯೂರು ರಥೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕೋಶಾಧಿಕಾರಿ ಸುರೇಶ್ ರೈ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀಗಳು ‌ತುಳುಲಿಪಿಯಲ್ಲಿ ಬರೆದ ‘ಅಧ್ಯಾತ್ಯ ರಾಮಾಯಣಂತರ್ಗತೊ ಸುಂದರ ಕಾಂಡ’ ಮತ್ತು ವಸಂತ ಕುಮಾರ್ ಪೆರ್ಲ ರಚಿತ ‘ತೂಪರಿಕೆ’ ತುಳು ಕೃತಿಗಳು ಬಿಡುಗಡೆಗೊಂಡವು.

ರೇಣುಕಾ ಎಸ್. ರೈ ಪ್ರಾರ್ಥನೆ ಹಾಡಿದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಡಾ ವಸಂತ ಕುಮಾರ್ ಪೆರ್ಲ ಸ್ವಾಗತಿಸಿ ಪ್ರಸ್ತಾವನೆಗೈದರು.

ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಕನ್ಯಾನ ವಂದಿಸಿದರು. ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು.

ರಾಮಾಯಣ ವಿಚಾರ ಗೋಷ್ಠಿ ರಾಮಾಯಣ ಪೊರ್ಲು – ತಿರ್ಲು‌ವಿಷಯದ ಬಗ್ಗೆ ಡಾ ರಾಜಶ್ರೀ ಶೆಟ್ಟಿ, ರಾಮಾಯಣೊಡ್ ದೆಂಗ್ ನ ಮಾನವೀಯ ಮೌಲ್ಯ ಬಗ್ಗೆ ಡಾ. ಶ್ರೀಶ ಕುಮಾರ್ ಎಂ.ಕೆ. ಹಾಗೂ ಜಾನಪದ ಸಿಂದರಿಕೆಡ್ ರಾಮಾಯಣೊ ಬಗ್ಗೆ ಡಾ. ರವೀಶ್ ಪಡುಮಲೆ ವಿಷಯ ಮಂಡಿಸಿದರು.

ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ 50ಕ್ಕೂ ಅಧಿಕ ಕವಿಗಳಿಂದ ಚುಟುಕು ಕವಿಗೋಷ್ಠಿ ಜರಗಿತು.

ತುಳು ಕವಿತೆ ಗಾಯನ ಗೋಷ್ಠಿ ಜರಗಿತು. ಕದ್ರಿ ನವನೀತ ಶೆಟ್ಟಿ, ವಿಜಯಾ ಶೆಟ್ಟಿ ಸಾಲೆತ್ತೂರು, ರಾಜಶ್ರೀ ಟಿ. ರೈ ಪೆರ್ಲ, ವಸಂತಿ ವಿಟ್ಲ ಹಾಗೂ ಸುಬ್ರಹ್ಮಣ್ಯ ಒಡಿಯೂರು ಅವರ ವಾಚಿಸಿದ ಕವನಗಳಿಗೆ

ಗಣೇಶ ಸೋಮಯಾಜಿ ಮತ್ತು ಜಯಶ್ರೀ ಶರ್ಮ ಚಿತ್ರ ಬಿಡಿಸಿದರು. ಜೈ ಗುರುದೇವ ಕಲಾಕೇಂದ್ರದ ಸದಸ್ಯರು ಕವನಗಳನ್ನು ಹಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮಹಾಬಲ ಭಡ್ ಕಾಡೂರು, ಚಂದ್ರಹಾಸ ಕಣಂತೂರು, ಭಾಸ್ಕರ ರೈ ಕುಕ್ಕುವಳ್ಳಿ, ಕಮಲಾಕ್ಷ ಬಜಿಲಕೇರಿ, ಶಶಿಧರ ಆಳ್ವ ದಾಸರಗುಡ್ಡೆ, ಅರುಣ್ ಶೆಟ್ಟಿ ಮುಳಿಹಿತ್ಲು, ಭಾಗೀರಥಿ ಕೊಡಿಯಾಲ, ವೆಂಕಪ್ಪ ರೈ ಕುರ್ಲೆತ್ತಿಮಾರ್, ಮೋನಪ್ಪ ಪೂಜಾರಿ ಕೆರೆಮಾರು, ವಸಂತ ಉರ್ವಸ್ಟೋರ್, ಸೋಮಪ್ಪ ನಾಯ್ಕ್ ಕಡಬ, ರವಿರಾಜ ಶೆಟ್ಟಿ ಒಡಿಯೂರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿದರು.

ಡಾ ಭಾಸ್ಕರಾನಂದ ಕುಮಾರ್ ಕಟೀಲ್, ಡಾ ಮಾಧವ ಎಂ.ಕೆ., ಚಂದ್ರಶೇಖರ ಶೆಟ್ಟಿ ಸುರೇಶ ಬನಾರಿ ಉಪಸ್ಥಿತರಿದ್ದರು‌.

ಪಾವಂಜೆ ಮೇಳದಿಂದ ‘ಅಯೋಧ್ಯಾ ದೀಪ’ ತುಳು ಯಕ್ಷಗಾನ ಜರಗಿತು. ಸುಂದರಕಾಂಡದ ತುಳು ಪ್ರವಚನ, ತುಳುವಿನಲ್ಲಿ ಹನುಮಾನ್ ಚಾಲೀಸಾ ಪಠಣ ಜರುಗಿತು.

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...