ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ವಿಕ ಜಿಲ್ಲಾ ಮಟ್ಟದ ಸುಪರ್ ಸ್ಟಾರ್ ರೈತ -2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಈ ದೇಶದಲ್ಲಿ ರೈತ ಎಲ್ಲರಿಗಿಂತ ನೆಮ್ಮದಿಯಲ್ಲಿ ಬದುಕುತ್ತಾನೆ. ತಿನ್ನುವ ಆಹಾರ ಉತ್ಪಾದಿಸುವ ರೈತರು ರಕ್ಷಣೆಯ ಹೊಣೆ ನಮ್ಮೆಲ್ಲರಿಗಿದೆ. ಕೃಷಿ-ಋಷಿ ಸಂಸ್ಕೃತಿ ಮರೆತರೆ ಅಪಾಯ. ಮನೆಯಲ್ಲಿರುವ ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗಬೇಕು. ಆ ಮೂಲಕ ದೇಶದ ಪರಿವರ್ತನೆಯಾಗಬೇಕು. ಮಾಧ್ಯಮಗಳು ಕೊಳದಲ್ಲಿ ಇದ್ದ ಮೀನುಗಳಂತೆ ಕಾರ್ಯವೆಸಗಬೇಕು ಎಂದು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಹೆಚ್. ಕೆಂಪೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಶ್ರದ್ಧಾ ಪ್ರಾರ್ಥನೆ ಹಾಡಿದರು.
ದ.ಕ, ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾವಯವ ಜಿಲ್ಲೆಯಾಗಿ ಪರಿವರ್ತನೆ ಮಾಡಲು ಸಾಧ್ಯತೆಗಳಿವೆ. ಇಲ್ಲಿನ ರೈತರು ರಾಸಾಯನಿಕ ಗೊಬ್ಬರ ಬಳಸುವ ಪದ್ಧತಿಯ ಮೇಲೆ ಹಠಕ್ಕೆ ಬೀಳದೆ ನಿಯಂತ್ರಣದಲ್ಲಿದ್ದಾರೆ ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ನ ಡೆಪ್ಯುಟಿ ರೀಜನಲ್ ಹೆಡ್ ವಿಶುಕುಮಾರ್ ಮಾತನಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಸಾವಯವ ಕೃಷಿ ಪದ್ಧತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪುರಸ್ಕೃತರಾದ ದೇವಿಪ್ರಸಾದ್ ಕಡಮ್ಮಜೆ, ಕೃಷಿ ಸಂಶೋಧಕ ಶಂಕರ್ ಭಟ್ ಬದನಾಜೆ, ಮಹಿಳಾ ಸಾಧಕಿ ಕಿರಣ ದೇರೆಬೈಲ್, ಅಶೋಕ್ ಶೇಣವ, ಜನಾರ್ದನ ಗೌಡ ನೆಲ್ಲಿ ಗುಡ್ಡೆ, ನವೀನ್ ಚಾತುಬಾಯಿ, ಸಂಜೀವ ಪೂಜಾರಿ ಗುಡ್ಡೆ ಕೊಪ್ಲ, ರಾಜೇಶ್ ಪಣಪಿಲ ರೈತ ಪ್ರಶಸ್ತಿ ಸ್ವೀಕರಿಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಶ್ರದ್ಧಾ ಪ್ರಾರ್ಥನೆ ಹಾಡಿದರು.
ಪತ್ರಕರ್ತ ಸುಧಾಕರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಆರೀಫ್ ಪಡುಬಿದ್ರಿ ವಂದಿಸಿದರು.
ಪತ್ರಕರ್ತರಾದ ಹರೀಶ್ ಮಾಂಬಾಡಿ, ಆರ್.ಸಿ ಭಟ್, ವಿಜಯ ಕೋಟ್ಯಾನ್ ಪ್ರಶಸ್ತಿ ಪತ್ರ ವಾಚಿಸಿದರು.