ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಎಪ್ರಿಲ್ 19ರಂದು ಜರಗುವ ಶ್ರೀ ಮದ್ರಾಮಾಯಣ ಮಹಾಯಜ್ಞ-ಹನುಮೋತ್ಸವದ ಪ್ರಯುಕ್ತ ಎ.14 ಆದಿತ್ಯವಾರ ಶ್ರೀ ರಾಮನವಮಿಯಿಂದ ಮೊದಲ್ಗೊಂಡು ಎ.19 ಶುಕ್ರವಾರ ಪ್ರಾತಃಕಾಲದ ತನಕ ಅಖಂಡ ಭಗವನ್ನಾಮ ಸಂಕೀರ್ತನೆ ನಡೆಯಲಿದೆ. ಎ.14ರಂದು ಪ್ರಾತಃಕಾಲ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಪ್ರಜ್ವಲನದೊಂದಿಗೆ ನಾಮಸಂಕೀರ್ತನೆಗೆ ಚಾಲನೆ ನೀಡಲಿದ್ದಾರೆ. ಈ ಸುಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಹಾಗೂ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು.
