ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆ.4 ರಂದು ಭಾನುವಾರ ಅಪರಾಹ್ಣ 3 ಗಂಟೆಗೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ’ಆಟಿದ ಆಯನೊ’ ಕಾರ್ಯಕ್ರಮ ಜರಗಲಿದೆ. ಈ ಪ್ರಯುಕ್ತ ’ಆಟಿದ ತೆನಸ್‌ದ ಪಂತೊ’ ಆಯೋಜಿಸಲಾಗಿದೆ. ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ವಿಶೇಷ ಶಾಖಾಹಾರಿ ತಿಂಡಿ-ತಿನಿಸುಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ವಿಶೇಷ ಬಹುಮಾನ ಕೊಡಲಾಗುವುದು.
