ವಿಟ್ಲ: ಧನ್ವಂತರೀ ಸಾಕ್ಷಾತ್ ವಿಷ್ಣುವಿನ ಅವತಾರ. ದೇವತೆಗಳ ವೈದ್ಯರೆ ಧನ್ವಂತರೀ. ಆದಿ-ವ್ಯಾಧಿಗಳ ನಿವಾರಣೆಗೆ ಧನ್ವಂತರಿಯ ಉಪಾಸನೆ ಅತೀ ಅಗತ್ಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಜರಗಿದ ಶ್ರೀ ಧನ್ವಂತರಿ ಹವನದ ಪೂರ್ಣಾಹುತಿಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಶಾರೀರಿಕ ಖಾಯಿಲೆಗಳ ನಿವಾರಣೆಯೊಂದಿಗೆ ಮಾನಸಿಕ ಖಾಯಿಲೆಯು ದೂರವಾಗುತ್ತದೆ. ಹಿತ-ಮಿತವಾಗಿ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಿಡಲು ಸಾಧ್ಯ. ಪಂಚತತ್ತ್ವಗಳ ಆರಾಧನೆಯು ನಮ್ಮ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ|ಮೂ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಧನ್ವಂತರೀ ಹವನ ಸಂಪನ್ನಗೊಂಡಿತು.

