ಬಂಟ್ವಾಳ: ನಮ್ಮಲ್ಲಿ ಹಣ ಸಂಪತ್ತು ಎಷ್ಟೇ ಇದ್ದರು ದೇವರನ್ನು ಕಾಣಲು ಸಾಧ್ಯವಿಲ್ಲ. ಭಕ್ತಿ ಪೂಜೆ ಭಜನೆಯಿಂದ ಭಗವಂತನನ್ನು ಆರಾಧನೆ ಮಾಡಿದರೆ ಮಾತ್ರ ಸಾಧ್ಯ ಎಂದು ಜಗದ್ಗರು ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ತಿಳಿಸಿದರು ಅವರು ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ 2 ರಿಂದ 4ರ ವರೇಗೆ ಜರಗಿದ ಜಾತ್ರಾಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.







ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ಪ್ರಧಾನ ಅರ್ಚಕರು ರಘರಾಮ್ ಭಟ್ ಮಠ. ಜಿ ಪಂ ಸದಸ್ಯೆ ಮಮತಾ ಎಂ ಶೆಟ್ಟಿ . ಪಡಂಗಡಿ ಗ್ರಾ ಪಂ ಅಧ್ಯಕ್ಷ ಮೀನಾಕ್ಷಿ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್. ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿ ಗುತ್ತು .ಅಧ್ಯಕ್ಷ ಸಂತೋಷ್ ಶೆಟ್ಟಿ ಪುರಿಪಟ್ಟ. ಪ್ರಧಾನ ಕಾರ್ಯದರ್ಶಿ ಸುಕೇಶ್ ಪೂಜಾರಿ ಓಡೀಲು. ಉಪಸ್ಥಿತರಿದ್ದರು. ಅಶ್ವಿತ್ ಎಂ ಓಡೀಲು ಸ್ವಾಗತಿಸಿ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು ಚಂದ್ರಪ್ಪ ಧನ್ಯವಾದ ವಿತ್ತರು.