ಬಂಟ್ವಾಳ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರೀರಾಮ ಪದವಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪದವಿ ವಿಭಾಗದ ಇತಿಹಾಸ ಉಪನ್ಯಾಸಕಿ ಶುಭಲತಾ ಇವರು ಮಾತನಾಡಿ, ಆಧ್ಯಾತ್ಮಿಕದ ಜೊತೆಗೆ ಶೈಕ್ಷಣಿಕ ಕ್ರಾಂತಿಗಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡಮಕ್ಕಳ ಬಾಳಿಗೆ ಬೆಳಕಾಗಿ, ತ್ರಿವಿಧ ದಾಸೋಹಗಳನ್ನು ಅಸಹಾಯಕರಿಗೆ ನೀಡುವ ಮೂಲಕ ಜಗತ್ತಿಗೆ ಮಾದರಿಯಾದವರು ಎಂದು ನುಡಿನಮನ ಸಲ್ಲಿಸಿದರು. ಅಲ್ಲದೆ, ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆದ ಅದ್ಭುತ ಅನುಭವಗಳನ್ನು ಹಂಚಿಕೊಂಡರು.

