Saturday, February 8, 2025

ಕೇಪು ಖಂಡಿಗ ಶಿವಕ್ಷೇತ್ರದಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರ ಸಮಾರೋಪ

ವಿಟ್ಲ: ಉತ್ತಮ ವ್ಯಕ್ತಿತ್ವ ಹೊಂದಿದ್ದವರಿಂದ ಸಾಮಾಜಿಕ ಸೇವಾ ಕಾರ್‍ಯ ಸಾಧ್ಯ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳು ಪೂರಕವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ಸಹಿಷ್ಣುತಾ ಭಾವನೆ, ಭ್ರಾತೃತ್ವ ಬೆಳೆಯಲು ಎನ್‌ಎಸ್‌ಎಸ್ ಮಾರ್ಗದರ್ಶನ ನೀಡುತ್ತದೆ. ವಿಶ್ವ ಮಾನವತೆಯ ಮನೋಭಾವನೆಯೊಂದಿಗೆ ಬದುಕು ಕಟ್ಟಲು ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಧುಸೂದನ್ ಎನ್. ತಿಳಿಸಿದರು.
ಅವರು ಶುಕ್ರವಾರ ಕೇಪು ಖಂಡಿಗ ಕೈಲಾಸೇಶ್ವರ ಶಿವ ಕ್ಷೇತ್ರದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಡಿ.22ರಿಂದ ನಡೆಯುತ್ತಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಬಿರ ಸಂಯೋಜಕ ಶಿವಕ್ಷೇತ್ರದ ಆಡಳಿತ ಮೊಕ್ತೇಸರ ರವೀಶ್ ಕೆ.ಎನ್. ಮಾತನಾಡಿ ವಿದ್ಯಾರ್ಥಿಗಳಲ್ಲಿ ಉತ್ತಮ ವಿಚಾರಗಳಿರಬೇಕು. ಮೂಲನಂಬಿಕೆಗಳನ್ನು ಘಾಸಿಗೊಳಿಸುವ ವಿಚಾರವಾದಗಳಿಂದ ವಿವಾದಗಳು ಸೃಷ್ಟಿಯಾಗುತ್ತದೆ. ದೇವರ ನಂಬಿಕೆ, ಧ್ಯಾನ, ಜಪತಪ ಇವುಗಳು ಕೇವಲ ಧಾರ್‍ಮಿಕ ವಿಚಾರಗಳಲ್ಲ, ಇವುಗಳೊಳಗೆ ವಿಜ್ಞಾನವೂ ಹುದುಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕಾಂತೇಶ್ ಎಸ್. ವಹಿಸಿದ್ದರು. ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಭಟ್, ಕೇಪು ಗ್ರಾಮ ಪಂಚಾಯಿತಿಯ ಸುರೇಶ್ ನಾಯ್ಕ, ಉದ್ಯಮಿ ಯು.ವಿ.ಜಯರಾಮ, ನೀರ್ಕಜೆ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಕೆ.ಜಯಂತಿ, ವಿಟ್ಲ ಜಮಾತೆ ಇಸ್ಮಾಯಿಲ್ ಹಿಂದದ ಅಧ್ಯಕ್ಷ ಹೈದರ್ ಅಲಿ, ಕರೋಪಾಡಿ ಗ್ರಾ. ಪಂ. ಸದಸ್ಯ ದಿನೇಶ್ ಶೆಟ್ಟಿ ಪಟ್ಲ ಭಾಗವಹಿಸಿದ್ದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾರಣ್ಣ ಕೆ ಸ್ವಾಗತಿಸಿದರು. ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಿಕೆ ರಶ್ಮಿ ಜೆ.ಆರ್ ವಂದಿಸಿದರು. ಶಿಬಿರಾಧಿಕಾರಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮುರಳಿ ಕೂಡ್ಲೂರು ಕಾರ್‍ಯಕ್ರಮ ನಿರೂಪಿಸಿದರು.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ : ಸಂಸದ ಕ್ಯಾ. ಚೌಟ ಆಗ್ರಹ

ನವದೆಹಲಿ: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕಾವಳಮೂಡೂರು : ತೆಂಗಿನ ಗಿಡ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್...