ಸ್ನೇಹ ಸಮ್ಮಿಲನ ತಂಡ ಮಂಗಳೂರು ಎನ್ನುವ ರಾಷ್ಟ್ರೀಯ ಸೇವಾ ಯೋಜನೆಯ ಹಳೆ ವಿದ್ಯಾರ್ಥಿ ಗಳ ಸ್ವಯಂ ಸೇವಕರ ತಂಡದಿಂದ ಎರಡು ದಿನದ ವಾರ್ಷಿಕ ವಿಶೇಷ ಶಿಬಿರ- 2024 ಬಂಟ್ವಾಳ ತಾಲೂಕಿನ ಕುದ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸ್ವಯಂಸೇವಕರಿಂದ ಶಾಲೆಗೆ ವಿಶೇಷ ತರಕಾರಿ ಕೈತೋಟವನ್ನು ರಚಿಸಿಕೊಡಲಾಯಿತು. ಹಾಗೂ ಮಕ್ಕಳಿಗೆ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಶಾಲೆಗೆ ಹಸ್ತಾಂತರಿಸಲಾಯಿತು
ಉದ್ಘಾಟನಾ ಕಾರ್ಯಕ್ರಮದ ಲ್ಲಿ ಸಮಾಜ ಸೇವೆಗಾಗಿ ಚಿಂತು ಸುಳ್ಯ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುದ್ರೆಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಠಲ, ಮಾಜಿ ಪಂಚಾಯತ್ ಸದಸ್ಯ ಸುಂದರ ಸಾಲಿಯಾನ್, ಮಣಿಕಂಠ ಭಜನಾ ಮಂದಿರದ ಅಧ್ಯಕ್ಷ ಲೋಕನಂದ ಏಳ್ತೀಮಾರ್, ಶಾಲಾ ಮುಖ್ಯ ಶಿಕ್ಷಕಿ ದೇವಿಕಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್, ಅಂಗನವಾಡಿ ಶಿಕ್ಷಕಿ ಸುರೇಖ, ಏನೇಪೋಯ ಮಂಗಳೂರಿನ ಗಾರ್ಡನ್ ಪರಿವೀಕ್ಷಕರಾದ ಹಂಸ, ಮೊದಲಾದವರು ಉಪಸ್ಥಿತರಿದ್ದರು.
ಸಮೃದ್ಧ ಪ್ರಾರ್ಥಿಸಿ, ಪ್ರಥಮ್ ಸ್ವಾಗತಿಸಿ, ಸ್ನೇಹ ಸಮ್ಮೇಳನದ ಮುಖ್ಯಸ್ಥರಾದ ನಾಗರಾಜ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿ, ನಿತಿನ್ ವಂದಿಸಿ, ಸುಶ್ಮಿತಾ ಕೆ ಕಾರ್ಯಕ್ರಮ ನಿರೂಪಿಸಿದರು.