ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇವರ ವತಿಯಿಂದ ಫೆಬ್ರವರಿ 20 ರಂದು ಸಂಜೆ 6.:30 ರಿಂದ 9 ನೇ ವರ್ಷದ ಸಾಂಸ್ಕೃತಿಕ ಉತ್ಸವ ಅಮೋಘ ಭಾರತೀಯ ನೃತ್ಯ ವೈಭವ ಜರಗಲಿದೆ.
ಕನ್ನಡ ಹಿಂದಿ ಟಿವಿ ರಿಯಾಲಿಟಿ ಶೋಗಳಲ್ಲಿ ಪ್ರಶಸ್ತಿ ವಿಜೇತ ಕುಮಾರಿ ಜ್ಞಾನ ಐತಾಳ್ ನೇತೃತ್ವದಲ್ಲಿ ಹೆಜ್ಜೆನಾದ ತಂಡ ಮಂಗಳೂರು ಇಲ್ಲಿನ ಮೂವತ್ತಕ್ಕೂ ಅಧಿಕ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


ಈ ವರ್ಷದ ಪ್ರತಿಷ್ಠಿತ
ಸುವರ್ಣ ರಂಗ ಸಮ್ಮಾನ್ 2019 ಪ್ರಶಸ್ತಿ ಖ್ಯಾತ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಖ್ಯಾತ ಕಿರುತೆರೆ ಚಿತ್ರರಂಗ ಕಲಾವಿದೆ ಜ್ಯೋತಿ ರೈ ಹಾಗೂ ದೇಯಿ ಬೈದೆತಿ ಚಲನಚಿತ್ರ ನಿರ್ದೇಶಕರಾದ ಸೂರ್ಯೋದಯ ಪೆರಂಪಳ್ಳಿ ಇವರಿಗೆ ನಾಡಿನ ಗಣ್ಯರ ಸಮ್ಮುಖದಲ್ಲಿ ಪ್ರಧಾನಗೊಳ್ಳಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.