ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತರುವ ದೇಶ ವಿಭಜಿಸುವ ಕಾಯ್ದೆ ವಿರುದ್ದ ಬಂಟ್ವಾಳ ತಾಲೂಕು ಮಟ್ಟದಲ್ಲಿ N R C ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಹಾಗೂ ಸರ್ವ ಸಂಘ ಸಂಸ್ಥೆಗಳು ಒಂದಾಗಿ ನಡೆಸುವ ಬೃಹತ್ ಪ್ರತಿಭಟನಾ ಸಮಾವೇಶವು ಡಿಸೆಂಬರ್ 30 (ಇಂದು) ಮಧ್ಯಾಹ್ನ 2:30ಕ್ಕೆ ಬಿ ಸಿ ರೋಡ್ ಬಂಟ್ವಾಳ ಸರ್ಕಲ್ (ರೈಲ್ವೆ ಬ್ರಿಜ್ ಬಳಿ) ನಿಂದ ಮೆರವಣಿಗೆ ನಡೆದು ಬಳಿಕ ಗೂಡಿನ ಬಳಿ ಮಾರ್ಗದಲ್ಲಿ ನಡೆಯಲಿದೆ.
ಬೃಹತ್ ಪ್ರತಿಭಟನೆಗೆ ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ಪೊಲೀಸರು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವುದರ ಜೊತೆಗೆ ವಿಶೇಷ ಕಣ್ಗಾವಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಬಂಟ್ವಾಳ ಪೊಲೀಸರ ಜೊತೆಗೆ ಹೆಚ್ಚುವರಿ ಯಾಗಿ ಬೇರೆ ಬೇರೆ ಕಡೆಗಳಿಂದ 1 ಎ.ಎಸ್.ಪಿ. 6 ವೃತ್ತನಿರೀಕ್ಷಕರುಗಳು, 19 ಸಬ್ ಇನ್ಸ್ ಪೆಕ್ಟರ್ ಗಳು, 6 ಕೆ.ಎಸ್.ಆರ್.ಪಿ.1 ಡಿ.ಎ.ಆರ್ ಮತ್ತು 300 ಅಧಿಕ ಪೊಲೀಸರು ನಿಯೋಜನೆ ಮಾಡಲಾಗಿದೆ. ಪಾಣೆಮಂಗಳೂರು, ಬಿಸಿರೋಡು ಹಾಗೂ ಮೆಲ್ಕಾರ್ ಮೂರು ಕಡೆಗಳಲ್ಲಿ ಡಿಯರ್ ಗ್ಯಾಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರತ್ಯೇಕ ವಿಡಿಯೋ ಕ್ಯಾಮರಾಗಳನ್ನು ಒಳಗೊಂಡು ಪ್ರತಿಚಲನಲಗಳನ್ನು ಗಮನಿಸಲಾಗುತ್ತಿದೆ ಎಂದು ಎಸ್.ಪಿ.ಲಕ್ಮೀಪ್ರಸಾದ್ ತಿಳಿಸಿದ್ದಾರೆ.

