ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ವೈದ್ಯರ ಚೀಟಿ ಇಲ್ಲದೇ ಯಾವುದೇ ಕಾರಣಕ್ಕೂ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇರುವ ಮಂದಿಗೆ ಮೆಡಿಕಲ್ ನಲ್ಲಿ ಮದ್ದು ನೀಡುವಂತಿಲ್ಲ. ಒಂದು ವೇಳೆ ವೈದ್ಯರ ಚೀಟಿ ಇದ್ದೂ ಔಷಧಿ ವಿತರಿಸಿದ್ದಲ್ಲಿ ವ್ಯಕ್ತಿ ಪೂರ್ಣ ಮಾಹಿತಿ ಅಗತ್ಯ. ತಪ್ಪಿದ್ದಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ದ.ಕ.ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.














