ಬಂಟ್ವಾಳ: “ಪೊಲೀಸ್ ಹಮೀದಾಕ” ಎಂದೇ ಚಿರಪರಿಚಿತರಾಗಿದ್ದ, ನಿವೃತ್ತ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಕೆ. ಅಬ್ದುಲ್ ಹಮೀದ್ (75) ಅವರು ವಯೋಸಹಜ ಅನಾರೋಗ್ಯದಿಂದ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರೂನಗರದಲ್ಲಿರುವ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಐವರು ಪುತ್ರಿಯರ ಸಹಿತ ಅಪಾಯ ಬಂಧುಬಳಗವನ್ನು ಅಗಲಿದ್ದಾರೆ. ಇವರ ಮೃತದೇಹವನ್ನು ನೆಹರೂನಗರದ ಮನೆಯಲ್ಲಿ ಇರಿಸಲಾಗಿದ್ದು, ಇವರ 2ನೆ ಪುತ್ರ ವಿದೇಶದಿಂದ ಬಂದ ಕೂಡಲೇ ಅಂತ್ಯಸಂಸ್ಕಾರ ನಡೆಸಲಾಗುವುದು. ಇಂದು (ಎ.27) ಬೆಳಿಗ್ಗೆ ದಫನ ಕಾರ್ಯ ಮಾಡಲಾಗವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುಮಾರು 20 ವರ್ಷಗಳ ಕಾಲ ಮಂಗಳೂರಿನ ಡಿಎಆರ್ ವಿಭಾಗದಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಆಗಿ ಹಾಗೂ ವಾಹನ ಚಾಲಕರಾಗಿ ಸೇವೆ ಸಲ್ಲಿರುವ ಹಮೀದ್ ಅವರು, “ಪೊಲೀಸ್ ಹಮೀದಾಕ” ಎಂದೇ ಚಿರಪರಿಚಿತರಾಗಿದ್ದರು. ಪೊಲೀಸ್ ಇಲಾಖೆಯಲ್ಲಿ ನಿವೃತ್ತರಾಗಿ 15 ವರ್ಷಗಳಾಗಿವೆ.
