ಬಂಟ್ವಾಳ: ನೇತ್ರಾವತಿ ನದಿಯ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಸೆ.ಮೀ ಲೆಕ್ಕದಲ್ಲಿ ಕಡಿಮೆಯಾಗುತ್ತಿದ್ದು ಮಂಗಳೂರು ಮಹಾನಗರ ದ ಜನತೆಗೆ ಕುಡಿಯುವ ನೀರಿನ ಬರ ಎದುರಾಗುವ ಲಕ್ಷಣಗಳು ಕಾಣುತ್ತಿವೆ.

ಬಂಟ್ವಾಳ ತಾಲೂಕಿನ ತುಂಬೆ ಗ್ರಾ.ಪಂ.ವ್ಯಾಪ್ತಿಯ ಲ್ಲಿ ರುವ ಮಂಗಳೂರು ಮಹಾನಗರ ಪಾಲಿಕೆ ಗೆ ಸೇರಿದ ತುಂಬೆ ವೆಂಟೆಡ್ ಡ್ಯಾಂ ನ ಇಂದಿನ ನೀರಿನ ಮಟ್ಟ 5.28 ಸೆ.ಮೀ.
ಉರಿಯುವ ಸುಡು ಬಿಸಿಲಿಗೆ ನೀರು ದಿನದಿಂದ ಅಂದಾಜು 5 ಸೆ.ಮೀ.ನಷ್ಟು ಅವಿಯಾಗುತ್ತಿದೆ.
ಇದೇ ರೀತಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಾ ಹೋದರೆ 38 ದಿನಗಳಿಗೆ ಮಾತ್ರ ಸಾಕಾಗುವಷ್ಟು ಕುಡಿಯುವ ನೀರು ಸಿಗಬಹುದು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮೇ ತಿಂಗಳಲ್ಲಿ ಮಳೆ ಬಂದರೆ ಮಾತ್ರ ಈ ಬಾರಿ ಕುಡಿಯುವ ನೀರಿಗೆ ತೊಂದರೆ ಯಾಗದು ಇಲ್ಲದಿದ್ದರೆ ಮಂಗಳೂರಿಗೆ ಉಡುಪಿ ಜಿಲ್ಲೆಯ ಟೈಮ್ ಟೇಬಲ್ ಇಲ್ಲಿಗೂ ಅನ್ವಯಿಸುತ್ತದೆ.
ವಾರಕ್ಕೆ ಮೂರೇ ದಿನ ನೀರು:
ಇದೇ ರೀತಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತ ಕಂಡು ಬಂದರೆ ಮೇ ಕೊನೆಯಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಅದರ ಮೊದಲೇ ಎಚ್ಚರಿಕೆ ವಹಿಸಬೇಕು ಎಂಬ ನಿಟ್ಟಿನಲ್ಲಿ ಮಂಗಳೂರು ಜನತೆಗೆ ಕುಡಿಯುವ ನೀರನ್ನು ವಾರಕ್ಕೆ ಮೂರೇ ದಿನ ನೀಡಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಕೆ ಮುಂದಾಗಿದೆ.
ನೀರಿನ ಮಟ್ಟ ಕಡಿಮೆ ಯಾಗುತ್ತಲೇ ತುಂಬೆ ಡ್ಯಾಂ ನ ಸನಿಹ ಯಾರನ್ನು ಕೂಡಾ ಸಿಬ್ಬಂದಿ ಗಳು ಬಿಡುತ್ತಿಲ್ಲ.
ಯಾಕೆ ಎಂದುಕೇಳಿದರೆ ಮಾತ್ರ ಅವರ ಬಳಿ ಉತ್ತರವಿಲ್ಲ.
ತುಂಬೆ ಡ್ಯಾಂ ನಲ್ಲಿರುವ ನೀರು ಕುಡಿಯುವ ಉದ್ದೇಶಕ್ಕಾಗಿ ಬಳಸಿದರೆ ಮೇ ಅಂತ್ಯದ ವರೆಗೆ ಯಾವುದೇ ತೊಂದರೆ ಯಿಲ್ಲದೆ ಬರಬಹುದು ಎಂಬುದು ತಜ್ಞರ ಮಾತು.
ಹಾಗಾಗಿ ಈ ನೀರು ಕುಡಿಯಲು ಅಲ್ಲದೆ ಇತರ ಉದ್ದೇಶ ಗಳಿಗೆ ಉಪಯೋಗಿಸುತ್ತಾರಾ ಎಂದು ನೋಡಬೇಕಾಗಿದೆ.
ಡ್ಯಾಂ.ಗೇಟ್ ಒಳಗೆ ಯಾರೂ ಹೋಗಬಾರದು ಎಂದು ಅದೇಶ ಮಾಡಿದ ಉದ್ದೇಶವಾದರೂ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ರದ್ದಾಗಿದೆ.