ಬಂಟ್ವಾಳ: ನೇತ್ರಾವತಿ ನದಿ ನೀರಿನ ಹರಿವು ಜಾಸ್ತಿಯಾಗಿದ್ದು ಮಧ್ಯಾಹ್ನದ ವೇಳೆ ನೀರಿನ ಮಟ್ಟ 8.4 ಆಗಿದೆ. ನೇತ್ರಾವತಿ ನದಿ ನೀರಿನ ಮಟ್ಟ 8.5 ರಿಂದ 9 ರಿಂದ ಮೆಲ್ಪಟ್ಟರೆ ಅಪಾಯದ ಮುನ್ಸೂಚನೆ ನೀಡುತ್ತದೆ.

ಬೆಳಿಗ್ಗೆ ಯಿಂದ ಮಳೆ ಕೊಂಚ ಕಡಿಮೆಯಾಗಿದ್ದು ನೀರು ಇಳಿಕೆಯಾಗುತ್ತಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್. ಆರ್.ತಿಳಿಸಿದ್ದಾರೆ.
ಜಕ್ರಿಬೆಟ್ಟು ರಸ್ತೆಗೆ ನೀರು ಬಂದಿದೆ ಆದರೆ ಸಂಚಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ.
ಆಲಡ್ಕ ತಗ್ಗು ಪ್ರದೇಶದಲ್ಲಿ ಕೆಲವು ಮನೆಗಳ ಅಂಗಲಕ್ಕೆ ನೀರು ಬಂದಿದ್ದು ಮಂಗಳವಾರವೇ ಇಲ್ಲಿನ ತಗ್ಗು ಪ್ರದೇಶದ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸರಪಾಡಿ ಅಜಿಲಮೊಗರು ಸಹಿತ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ರಸ್ತೆಯ ಮೇಲೆ ಬಂದಿದೆ. ಆದರೆ ಈವರಗೆ ಯಾವುದೇ ಅಪಾಯ ಇಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸಕಲ ವ್ಯವಸ್ಥೆ ಗಳನ್ನು ತಾಲೂಕು ಆಡಳಿತ ಕೈಗೊಂಡಿದೆ ಎಂದು ತಿಳಿಸಿದ್ದಾರೆ.