Wednesday, June 25, 2025

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ನೆಟ್ಲಮುಡ್ನೂರು ಗ್ರಾ. ಪಂ ಮುಂಭಾಗದಲ್ಲಿ ಪ್ರೊಟೆಸ್ಟ್..

ಬಂಟ್ವಾಳ :  ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ನೆಟ್ಲ ಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ನೆರಳಕಟ್ಟೆ(ಗಣೇಶ ನಗರ) ಪಂಚಾಯತ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಕ್ತಿ ಕೇಂದ್ರ ಪ್ರಮುಖ್ ಶ್ರೀ ಧನಂಜಯ ಗೌಡ ವಹಿಸಿದ್ದರು.

ಮಾಣಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಶ್ ಭಂಡಾರಿ ಪ್ರದಾನ ಭಾಷಣ ಮಾಡಿದರು.

ನೆರಳಕಟ್ಟೆ ಸೊಸೈಟಿ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಪಂಚಾಯತ್ ಸದಸ್ಯೆರಾದ ಶ್ರೀಮತಿ ಸುಜಾತಾ ಜಗದೀಶ್, ಶ್ರೀಮತಿ ಶಾಲಿನಿ ಹರೀಶ್, ಸೊಸೈಟಿ ನಿರ್ದೇಶಕರಾದ ಅಶೋಕ್ ರೈ, ಮಂಡಲ ಮೋರ್ಚಾ ಕಾರ್ಯದರ್ಶಿ ಗೋಪಾಲ್ ಕಾರಾಗುಡ್ಡೆ, ಬೂತ್ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ಲೋಕೇಶ್ ಗೌಡ, ಶ್ರೀ ದಿನಕರ್ ನಾಯಕ್ ಹಾಗು ಬೂತ್ ಕಾರ್ಯದರ್ಶಿಗಳು ಸಮಿತಿ ಸದಸ್ಯರು ಸೇರಿದಂತೆ ಹಲವಾರು ಕಾರ್ಯಕರ್ತರು, ಗ್ರಾಮದ ಪಕ್ಷ ಪ್ರಮುಖರು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ಕರ್ನಾಟಕ ರಾಜ್ಯಪಾಲಾರಿಗೆ ಮನವಿ ನೀಡಲಾಯಿತು.ಪ್ರತಿಭಟನಾ ಕಾರ್ಯಕ್ರಮದ ಮೊದಲು ಜನಸಂಘ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸ ಆಚರಿಸಲಾಯಿತು.

ಪಂಚಾಯತ್ ಸದಸ್ಯ ಶ್ರೀ ಅಶೋಕ್ ರೈ ಸ್ವಾಗತಿಸಿ, ವಂದಿಸಿದರು.

More from the blog

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...

Rain Alert : ರಾಜ್ಯದಲ್ಲಿ ಮುಂಗಾರು ಚುರುಕು – ಕರಾವಳಿ ಸೇರಿ ಹಲವೆಡೆ 3 ದಿನ ಭಾರೀ ಮಳೆ ಸಾಧ್ಯತೆ..

ಮಂಗಳೂರು : ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾಗಿ 15 ದಿನಗಳು ಕಳೆದರೂ...

ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ

ಬಂಟ್ವಾಳ : ಕವಿ‌, ಸಾಹಿತಿ, ಸಂಘಟಕ ಯುವವಾಹಿನಿಯ ಸಲಹೆಗಾರ ಬಿ ತಮ್ಮಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ ಆಯೋಜಿಸಲಾತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹೊಸಪೇಟೆ , ವಿಜಯನಗರ, ಬೆಂಗಳೂರು, ಚಿತ್ರದುರ್ಗ,...