ಬಂಟ್ವಾಳ: ಕುಪಿತಳಾಗಿ ಭೋರ್ಗರೆಯುತ್ತಾ ಹರಿಯುತ್ತಿದ್ದ ನೇತ್ರಾವತಿ ಶಾಂತವಾಗಿ ಹರಿಯುವ ಮನಸ್ಸು ಮಾಡಿದ್ದಾಳೆ.
ಮಳೆಯ ಪ್ರಮಾಣ ಇಳಿಕೆ ಯಾದ್ದರಿಂದ ನೇತ್ರಾವತಿಯ ನದಿಯ ನೀರಿನ ಮಟ್ಟ ಕಡಿಮೆ ಯಾಗಿದೆ.
ಇಂದು ಬೆಳಿಗ್ಗೆ ಯ ವೇಳೆ ನೇತ್ರಾವತಿ ನೀರಿನ ಮಟ್ಟ 9.1 ಅಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಿಳಿಸಿದರು.
ಶನಿವಾರ ನೆರೆಗೆ ಸಿಲುಕಿ ನಲುಗಿದ ಬಂಟ್ವಾಳ ಪೇಟೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ರಸ್ತೆ ಸಂಚಾರಕ್ಕೆ ಮುಕ್ತ:
ಬಂಟ್ವಾಳದಿಂದ ಧರ್ಮಸ್ಥಳ ಕ್ಕೆ ಹೋಗುವ ರಸ್ತೆ ಜಕ್ರಿಬೆಟ್ಟು ವಿನಲ್ಲಿ ರಸ್ತೆಗೆ ನೀರು ಬಂದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಆದರೆ ರಾತ್ರಿಯಿಂದ ನೀರಿನ ಮಟ್ಟ ಕಡಿಮೆಯಾಗುತ್ತ ಬಂದಿರುವ ದರಿಂದ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಗಂಜಿಕೇಂದ್ರದಲ್ಲಿರುವ ಕುಟುಂಬ ಗಳು ಕೂಡ ಮರಳಿ ವಾಪಸು ಮನೆಯ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ.

