Thursday, February 13, 2025

ನೆರೆ ಬಂದು ಹೋದ ಮೇಲೆ…..

ಬಂಟ್ವಾಳ: ನೆರೆ ಇಳಿದ ಬಳಿಕ ನೇತ್ರಾವತಿ ಶಾಂತವಾಗಿ ಹರಿಯುತ್ತಿದ್ದರೆ , ಬಂಟ್ವಾಳ ದ ಸ್ಥಿತಿ ಹೇಗಿದೆ ಗೊತ್ತಾ…ರಸ್ತೆ ಯೆಲ್ಲಾ ಕೆಸರು ಕೆಸರು, ಮನೆಯೊಳಗೆ ಕೆಸರು, ಕಸದ ರಾಶಿ, ಬಾಟಲಿ ರಾಶಿ, ಹುಲ್ಲುಕಡ್ಡಿ ಹೀಗೆ ಯಾವುದು ಇಲ್ಲ ಯಾವುದು ಇದೆ ಅನ್ನುವುದೇ ಗೊತ್ತಾಗುತ್ತಿಲ್ಲ. ಮನೆಯೊಳಗೆ ತುಂಬಿರುವ ಕೊಳಕನ್ನು ಕ್ಲೀನ್ ಮಾಡುವುದೇ ದೊಡ್ಡ ಸಾಹಸದ ಕೆಲಸ.


ನೆಂಟರ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಎರಡು ದಿನಗಳ ಕಾಲ ಕಳೆದ ನೆರೆಸಂತ್ರಸ್ತರು ವಾಪಾಸು ಮನೆಯ ಕಡೆ ಬಂದಿದ್ದಾರೆ.
ಮನೆಯೊಳಗೆ ಅಂಗಡಿಯೊಳಗೆ ಪೇಟೆಗೆ ಕಾಲಿಡುವ ಮುನ್ನ ಹಿಂದೆ ಮುಂದೆ ನೋಡಬೇಕಿದೆ.
ಬೆಳಿಗ್ಗೆ ಯಿಂದಲೇ ಅಂಗಡಿ ಮನೆಗಳನ್ನು ಶುಚಿ ಮಾಡುವ ಕೆಲಸ ಕಂಡುಬಂದರೆ, ರಸ್ತೆಯನ್ನು ಪುರಸಭಾ ಸಿಬ್ಬಂದಿ ಗಳು ಸ್ವಚ್ಚ ಮಾಡುತ್ತಿದ್ದರು.
ಇನ್ನೂ ಕೂಡ ಕರೆಂಟು ಬಂದಿಲ್ಲ, ಮನೆಯೊಳಗೆ ಒಲೆ ಹುರಿದಿಲ್ಲ, ಸಾಮಾಗ್ರಿಗಳನ್ನು ತಂದಿಲ್ಲ. ಅದರೂ ನೆರೆ ಇಳಿದಿರುವ ಬಗ್ಗೆ ಜನರಿಗೆ ತುಸು ನೆಮ್ಮದಿ.
ಅದರೂ ನೆರೆ ಬಂದು ಹೋದ ಬಳಿಕ ಇಲ್ಲಿ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಗಳು ಹೆಚ್ಚಿವೆ, ಹಾಗಾಗಿ ಸ್ವಚ್ಛತೆಗೆ ಹೆಚ್ಚಿನ ಅಧ್ಯತೆಯ ನೆಲೆಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ ನೀಡಿದ್ದಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...