Sunday, February 16, 2025

ಆಸರೆ ಗೆಳೆಯರ ಬಳಗದಿಂದ ಎರಡು‌ ಕುಟುಂಬಕ್ಕೆ ರೂ.44,000/- ಸಹಾಯ ಧನ ಹಸ್ತಾಂತರ

ಮಂಗಳೂರು: ಫೆ. 10. ದುಡಿದು ಮನೆ ಸಂಸಾರಕ್ಕೆ ಆಧಾರವಾಗಿದ್ದ ಹರೆಯದ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಬಂಟ್ವಾಳದ ಲಕ್ಷ್ಮೀಯವರಿಗೆ ಮತ್ತು ಪತಿಯಿಂದ ಪರಿತ್ಯಕ್ತೆಯಾಗಿ ಹದಿ ಹರೆಯದ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪುತ್ತೂರಿನ ಕುಸುಮರವರಿಗೆ ಸ್ವಂತ ಮನೆ ಕಟ್ಟಲು ಸಹಕರಿಸುವ ನಿಟ್ಟಿನಲ್ಲಿ ಅಡ್ಮಿನ್ ಹೇಮಂತ್ ಕುಮಾರ್ ಕಿನ್ನಿಗೋಳಿಯವರ ನೇತೃತ್ವದಲ್ಲಿ ಆಸರೆ ಗೆಳೆಯರ ಬಳಗದಿಂದ ಸಹಾಯ ಧನ ಸಂಗ್ರಹಿಸುವ ಅಭಿಯಾನದಲ್ಲಿ ಸಹೃದಯಿ ದಾನಿಗಳಿಂದ ಸಂಗ್ರಹಿಸಿದ ₹ 44000/- ಗಳನ್ನು ಸಂತೃಸ್ತರಿಗೆ ₹ 22000/- ದಂತೆ ಸಮಾನವಾಗಿ ದಿನಾಂಕ 10/ 02/ 2019 ರ ಭಾನುವಾರ ಮಂಗಳೂರು ಪೋಲಿಸ್ ಲೇನ್ ನ ಶ್ರೀ ದೇವಿ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು.

ಸಹಾಯ ಧನ ಹಸ್ತಾಂತರದ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ(ಬಿ.ಜೆ.ಪಿ) ಮತ್ತು ಆಸರೆ ಬಳಗದ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ , ಸದಸ್ಯರಾದ ರಮೇಶ್ ಕುಮಾರ್ ವಗ್ಗ, ರಂಜಿತ್ ಕುಮಾರ್ ಮೂಡಬಿದರೆ, ನಿತೇಶ್ ಕುಕ್ಯಾನ್ ಏಳಿಂಜೆ, ಕಿರಣ್ ಕುಲಾಲ್ ಮರಕಡ, ದಿನೇಶ್ ಕುಲಾಲ್ ಬೀಡು, ನರೇಶ್ ಕೆ.ಟಿ. ಬೆಳ್ತಂಗಡಿ, ಅರುಣ್ ಕುಲಾಲ್ ಮೂಳೂರು, ಉದಯ್ ಕುಲಾಲ್ ಕಳತ್ತೂರು, ಚಂದ್ರ ಪ್ರಭಾ ಮಂಗಳೂರು, ಅನಿಲ್ ಪೂಜಾರಿ ಮಂಗಳೂರು ಉಪಸ್ಥಿತರಿದ್ದರು. ಸಹಾಯ ಧನವಿತ್ತು ಸಹಕರಿಸಿದ ಸಮಸ್ತ ಸಹೃದಯಿ ದಾನಿಗಳಿಗೆ ಅನಂತಾನಂತ ಕೃತಜ್ಞತೆಗಳು.

More from the blog

ಬಲ್ಲು ಕೊರಗ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯ ಹಾಗೂ ಜೇನು‌ಕುರುಬರ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ಜನ್ ಮನ್ ಯೋಜನೆಯ ಮೂಲಕ 20 ಕೋಟಿ ರೂ ಮಂಜೂರಾಗಿದೆ, ಸಮಾಜದ ಎಲ್ಲಾ ವರ್ಗದವರನ್ನು ಮುಖ್ಯವಾಹಿನಿಗೆ ತರುವುದು...

ಬಂಟ್ವಾಳದಲ್ಲಿ ಸಂತ ಶ್ರೀ ಸೇವಾಲಾಲ ಜಯಂತಿ ಆಚರಣೆ

ಬಂಟ್ವಾಳ : ಭರತ ಖಂಡದ ಧಾರ್ಮಿಕ ರಾಯಾಭಾರಿ ಎಂದೇ ಹೆಸರಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನಗೆದ್ದವರು. ಸಂತ ಶ್ರೀ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಆರಾಧ್ಯ ದೈವ...

ಕೆಲಿಂಜ ಮೆಚ್ಚಿ ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕೆಲಿಂಜ ಘಟಕದ ಅಶ್ರಯದಲ್ಲಿ ಕೆಲಿಂಜ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೈವನರ್ತಕರಾದ ಶ್ರೀ...

ಚರಂಡಿಗೆ ಬಿದ್ದ ರಿಕ್ಷಾ : ಚಾಲಕ ಸಾವು, ಮಕ್ಕಳಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಪ್ರಯಾಣಿಕ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಅಮ್ಮುಂಜೆಯಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಬಂಟ್ವಾಳ ತಾಲೂಕಿನ ಅಮ್ಮುಂಜೆ...