ಬಂಟ್ವಾಳ: ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸಿ ಏನ್ ಅಪ್ಪಚ್ಚು ಅವರ ಅಧ್ಯಕ್ಷತೆಯಲ್ಲಿ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ನೆರೆ ಸಂತಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷಗಳನ್ನು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಮುಖಾಂತರ ಕಾರ್ಯದರ್ಶಿ ಓಂಪ್ರಸಾದ್ ಬಿ ಯವರೊಂದಿಗೆ ಹಸ್ತಾಂತರಿಸಿದರು.
ಶಾಸಕರು ಬಂಟ್ವಾಳ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಮಾನವೀಯ ಕಾಳಜಿಗೆ ಅಭಿನಂದನೆ ಸಲ್ಲಿಸಿ ಮುಂದಕ್ಕೂ ಸಮಾಜದ ಏಳಿಗೆ ಬಗ್ಗೆ ತುಡಿತ ಇರಲಿ ಎನ್ನುವ ಕಳಕಳಿಯನ್ನು ವ್ಯಕ್ತ ಪಡಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಗೌರವಾಧ್ಯಕ್ಷರಾದ ಸದಾನಂದ ಶೆಟ್ಟಿಯವರು ಅಜ್ಜಿ ಬೆಟ್ಟು ಸರಕಾರೀ ಪ್ರೌಢ ಶಾಲೆಯ ದತ್ತು ಪಡ ಕೊಂಡ ಮಕ್ಕಳಿಗೆ 50000 ಸಹಾಯ ದನ ವಿತರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿಯವರು ಲಯನ್ಸ್ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ನಡೆಸುತ್ತಿರುವ ವಿಶೇಷ ವಿಕಲ ಚೇತನ ಪಾಲನಾ ಕೇಂದ್ರಕ್ಕೆ 25000 . ಸಹಾಯ ದನ ವಿತರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಉಪಾದ್ಯಕ್ಷರುಗಳಾದ ಜೋಕಿಮ್ ಲೂಯಿಸ್ ಪಿಂಟೋ
,ಪಿ ಎಂ ನಾರಾಯಣ ಮತ್ತು ಏ ವಿನೋದ್ ಪುತ್ತೂರು ಇವರು ಕುರಿಯಾಳ ಗ್ರಾಮದ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿಶೇಷ ವಿಕಲ ಚೇತನ ವಿದ್ಯಾರ್ಥಿನಿ ಮತ್ತು ಅವಳ ವಿಶೇಷ ವಿಕಲ ಚೇತನ ತಂದೆಯ ಸಂಸಾರಕ್ಕೆ ಆಸರೆಯಾಗಿ 20000 ಸಹಾಯ ದನವನ್ನು ವಿತರಿಸಿದರು
ವೇದಿಕೆಯಲ್ಲಿ ಲಯನ್ಸ್ ಸೇವಾ ಟ್ರಸ್ಟಿನ ಅಧ್ಯಕ್ಷ ಡಾ ವಸಂತ್ ಬಾಳಿಗಾ ಸಂಘದ ಮಾನವೀಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು
ಸಂಘದ ಅಧ್ಯಕ್ಷ ಸಿ ಏನ್ ಅಪ್ಪಚ್ಚು ರವರು ಎಲ್ಲರನ್ನು ಸ್ವಾಗತಿಸಿ ಹಿಂದಿನಿಂದ ಸಂಘದ ವತಿಯಿಂದ ನಡೆಸಿದ್ದ ಸಮಾಜ ಮುಖಿ ಕಾರ್ಯಕ್ರಮಗಳ ಮೆಲುಕು ಹಾಕಿ ಕಳೆದ ಕೆಲವು ವರ್ಷಗಳಿಂದ ನಮ್ಮ ವ್ಯಾಪಾರದಲ್ಲಿ ಉದ್ಭವಿಸಿದ ಗಂಭೀರ ಸಮಸ್ಯೆಗಳಿಂದಾಗಿ ಸ್ಥಗಿತ ಗೊಂಡಿದ್ದರೂ ಪುನರಾರಂಭ ಗೊಂಡ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.
ಕೋಶಾಧಿಕಾರಿ ಸದಾನಂದ ಶೆಟ್ಟಿ ಸಹಕಾರವನ್ನಿತ್ತು , ಲೋಕನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
ಕಾರ್ಯದರ್ಶಿ ಓಂಪ್ರಸಾದ್.ಬಿ ಧನ್ಯವಾದ ಸಮರ್ಪಣೆ ಮಾಡಿದರು.

