ಬಂಟ್ವಾಳ : ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ದ.ಕ.ಜಿ.ಪಂ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸರ್ವಸದಸ್ಯರ ಸಭೆಯು ಫೆ.7 ರಂದು ಬೆಳಿಗ್ಗೆ 9-30 ಕ್ಕೆ ನೇರಳಕಟ್ಟೆಯ ಶಾಲೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಸಂಘದ ಗೌರವಾದ್ಯಕ್ಷ ಶ್ರೀನಿವಾಸ ಮೆಲ್ಕಾರ್, ಅದ್ಯಕ್ಷ ವಿಠಲ ನಾಯ್ಕ್, ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ರೋಹಿತಾಶ್ವ, ಉಪಾದ್ಯಕ್ಷ ಸಾಹುಲ್ ಹಮೀದ್ ಪರ್ಲೊಟ್ಟು, ಶತಮಾನೋತ್ಸವ ಸಮಿತಿ ಕಾರ್ಯಾದ್ಯಕ್ಷ ಕೆ.ನಿರಂಜನ್ ರೈ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಸಹ ಶಿಕ್ಷಕ ಸುಧಾಕರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
