Monday, February 2, 2026

ಎಪ್ರಿಲ್ 7 ರಂದು ನೇರಳಕಟ್ಟೆಯಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ

ವಿಟ್ಲ : ಎ. 05, ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಎಪ್ರಿಲ್ 7 ರಂದು 12 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವು ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೂರ್ನಡ್ಕ ಪೀರ್ ಮೊಹಲ್ಲಾ ಜಮಾಅತ್‍ನ ಖಾಝಿ ಹಾಜಿ ಬಿ.ಕೆ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ ನಿಕಾಹ್‍ನ ನೇತ್ರತ್ವ ವಹಿಸುವರು. ಅಲ್ ವಫಾ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಶಾಸಕ ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಅಲ್ ಮುಝೈನ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ. ಝಕರಿಯಾ ಜೋಕಟ್ಟೆ, ಎಕ್ಸ್‍ಪರ್ಟೈಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್. ಶೇಖಬ್ಬ ಕರ್ನೀರೆ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ವೈಟ್‍ಸ್ಟೋನ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಹಾಸನ ಜನಪ್ರಿಯ ಆಸ್ಪತ್ರೆಯ ಮಾಲಕ ಡಾ. ಅಬ್ದುಲ್ ಬಶೀರ್ ವಿ.ಕೆ, ಹೈಸಂ ಸ್ಟೀಲ್ಸ್ ನ ಆಡಳಿತ ನಿರ್ದೇಶಕ ಅಹ್ಮದ್ ಶಾಕಿರ್, ಮುಹಮ್ಮದ್ ಫಾರೂಕ್ ಪೋರ್ಟ್‍ಫೋಲಿಯೊ, ಹಾಗೂ ಮನ್ನಾನ್ ಫೌಂಡೇಶನ್‍ನ ಅಧ್ಯಕ್ಷ ಆರಿಫ್ ಬಿ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More from the blog

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ : ಸಾಮಾನ್ಯ ಸಭೆ ಸ್ಪಷ್ಟನೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಗೆ ಬಂದ ಅಭಿವೃದ್ಧಿ ಶುಲ್ಕ ದ ಸುತ್ತೋಲೆಯ...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...

ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ : ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ...